ಕ್ರೈಂ

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಕಲ್ಲುಗುಂಡಿ: ಇಲ್ಲಿನ ಮುಖ್ಯಪೇಟೆಯಲ್ಲಿ ಇಬ್ಬರ ನಡುವೆ ಮಾರಾಮಾರಿ ಹೊಡೆದಾಟ ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆದಿದ್ದು ಘಟನೆಯಲ್ಲಿ ಒಬ್ಬ ಮತ್ತೊಬ್ಬನ ಕೈ ಬೆರಳನ್ನು ಕತ್ತರಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳು ರತೀಶ್ ಎನ್ನುವವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಏನಿದು ಘಟನೆ?

ಕಲ್ಲುಗುಂಡಿಯ ಕಾಂಟ್ರಾಕ್ಟರ್ ಒಬ್ಬರ ಬಳಿ ಶೀನ ಕೊಯನಾಡು ಎನ್ನುವ ವ್ಯಕ್ತಿ ಕೆಲಸಕ್ಕೆ ಬರುತ್ತಿದ್ದ, ನಿತ್ಯ ಕುಡಿದು ಕೆಲಸಕ್ಕೆ ಬರುತ್ತಿದ್ದ. ಇದನ್ನು ಅಲ್ಲಿ ಕೆಲಸ ಮಾಡುತ್ತಿರುವ ಜೀಪ್ ಡ್ರೈವರ್ ರತೀಶ್ ಪ್ರಶ್ನಿಸಿದ್ದಾರೆ. ನೀನು ಕುಡಿದು ಕೆಲಸಕ್ಕೆ ಬರುವುದಾದರೆ ಬರಬೇಡ ಎಂದು ಹೇಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಶೀನ ಕೊಯನಾಡು ಹೊಡೆದಾಟಕ್ಕೆ ಇಳಿದಿದ್ದಾನೆ. ಮಾತ್ರವಲ್ಲ ಕತ್ತಿಯಿಂದ ರತೀಶ್ ಗೆ ಕಡಿದಿದ್ದಾನೆ. ಇದರಿಂದಾಗಿ ರತೀಶ್ ಅವರ ಕೈ ಬೆರಳು ತುಂಡಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Related posts

ರೈಲಿನಿಂದ ಇಳಿಯುವಾಗ ತಾಯಿಯ ಕೈತಪ್ಪಿ ಮೋರಿಗೆ ಬಿದ್ದ 4 ತಿಂಗಳ ಮಗು!ತಾಯಿಯ ಕಣ್ಣೆದುರೇ ಕೊಚ್ಚಿ ಹೋದ ಹಸುಗೂಸು! ಮುಂದೇನಾಯ್ತು..?

ಮಡಿಕೇರಿ: ರೈಫಲ್ ನಿಂದ ಗುಂಡು ಹಾರಿ ಯುವಕ ಸಾವು, ಕಾವೇರಿ ಹೊಳೆಯಲ್ಲಿ ಮೀನು ಬೇಟೆಗೆ ತರಳಿದ್ದಾಗ ನಡೆದಿದ್ದೇನು..?

ರಶ್ಮಿಕಾ ನಕಲಿ ವಿಡಿಯೋ ಪ್ರಕರಣ: ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಕೇಂದ್ರ ಸರ್ಕಾರ ನೀಡಿದ ಎಚ್ಚರಿಕೆಯೇನು? ಮತ್ತಷ್ಟು ಸ್ಟ್ರಿಕ್ಟ್ ಆಗಲಿದೆಯಾ ಸೋಷಿಯಲ್ ಮೀಡಿಯಾ?