ದೇಶ-ಪ್ರಪಂಚ

ಭವಾನಿಪುರ ಮತ ಎಣಿಕೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುನ್ನಡೆ

25

ಕೋಲ್ಕತ್ತ: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯ ಎರಡನೇ ಸುತ್ತು ಕೊನೆಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2,377 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಟಿಎಂಸಿ ಅಭ್ಯರ್ಥಿಯೂ ಆಗಿರುವ ಮಮತಾ ಅವರು 5,333 ಮತಗಳನ್ನು ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಪ್ರಿಯಾಂಕಾ ಟಿಬ್ರೆವಾಲ್ ಅವರು 2,956 ಮತಗಳನ್ನು ಗಳಿಸಿದ್ದಾರೆ. ಸಿಪಿಎಂನ ಶ್ರೀಜಿಬ್ ಬಿಸ್ವಾಸ್ 132 ಮತಗಳನ್ನು ಗಳಿಸಿದ್ದಾರೆ. ಸೆ.30ರಂದು ಚುನಾವಣೆ ನಡೆದಿತ್ತು. ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಇಲ್ಲಿ ಗೆಲುವು ಸಾಧಿಸಲೇಬೇಕಾಗಿದೆ.