ಕ್ರೈಂ

ಬೆಳ್ಳಾರೆ: ಮಸೀದಿಯಲ್ಲಿ ಎರಡೂ ತಂಡಗಳ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು

ಸುಳ್ಯ: ಬೆಳ್ಳಾರೆ ಮಸೀದಿಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಇತ್ತಂಡಗಳ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ. ಬೆಳ್ಳಾರೆ ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಫಾರ್ಮ್ ಕೊಡುವ ವಿಷಯದಲ್ಲಿ ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಜರುದ್ದೀನ್, ಜಮಾಲುದ್ದೀನ್ ಕೆ.ಎಸ್, ಅಬ್ದುಲ್ ಜಮಾಲ್ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆಯಿತು ಎನ್ನಲಾಗಿದೆ. ಗಾಯಗೊಂಡ ಅಜರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದೆ. ಹೈದರಾಲಿ ಮತ್ತು ಆಸಿರ್ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಎರಡೂ ಕಡೆಯವರು ಪೊಲೀಸು ದೂರು ನೀಡಿದ್ದು ಇತ್ತಂಡದ ಮೇಲೆ ಪ್ರಕರಣ ದಾಖಲಾಗಿದೆ.

Related posts

ಕುಡಿದ ನಶೆಯಲ್ಲಿ ಡಯಾಲಿಸಿಸ್‌ ಮಾಡಿದ್ರಾ ಆಸ್ಪತ್ರೆ ಸಿಬ್ಬಂದಿ? ಮಹಿಳೆಯ ದುರಂತ ಅಂತ್ಯ ಕಂಡು ಗೋಳಾಡಿದ ಪೋಷಕರು! ಇಲ್ಲಿದೆ ಕಣ್ಣೀರ ಕಥೆ

ಕೊಡಗು: ಬೈಕ್ ಗುದ್ದಿ ಯುವಕ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ದುರಂತಕ್ಕೆ ನಾನೇ ಕಾರಣವೆಂದು ಬೈಕ್ ಸವಾರ ಆತ್ಮಹತ್ಯೆ..! ಇಲ್ಲಿದೆ ಮನಕಲಕೋ ಘಟನೆ

ಪೊಲೀಸರ ಎದುರೇ ಶಾಸಕನ ಕಪಾಳಕ್ಕೆ ಬಾರಿಸಿದ ವಕೀಲ..! ಇಲ್ಲಿದೆ ವೈರಲ್ ವಿಡಿಯೋ