ಬಾಳೆ ಹಣ್ಣು ಗಾತ್ರದ ಚರ್ಚೆ, ಬಿದ್ದು..ಬಿದ್ದು ನಕ್ಕ ಪಾಕಿಸ್ತಾನಿ ಟೀವಿ ನಿರೂಪಕಿ, ವೈರಲ್ ವಿಡಿಯೋ ಇಲ್ಲಿದೆ ನೋಡಿ

4

ಕರಾಚಿ: ಸಾಮಾನ್ಯವಾಗಿ ಸುದ್ದಿ ವಾಹಿನಿಗಳಲ್ಲಿ ಯಾವುದೇ ತಜ್ಞರು, ಪರಿಣತರನ್ನು ಕರೆಸಿ ಅವರೊಂದಿಗೆ ಚರ್ಚೆಗಳನ್ನು ನಡೆಸಲಾಗುತ್ತದೆ. ಹೀಗೆ ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಅಂಥ ಅತಿಥಿಯೊಬ್ಬರನ್ನು ಕರೆಸಿ, ಅವರು ಹೇಳಿದ ಬಾಳೆಹಣ್ಣಿನ ಕತೆ ಕೇಳಿ, ಸುದ್ದಿ ನಿರೂಪಕಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಫನ್ನಿ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಭರ್ಜರಿ ವೈರಲ್​ ಆಗಿದೆ. 

ಏನಿದು ಘಟನೆ?

ಸುದ್ದಿ ನಿರೂಪಕಿಯ ಹೆಸರು ಅಲ್ವೀನಾ ಅಘಾ. ಪಾಕಿಸ್ತಾನದಲ್ಲಿ ಕೃಷಿ, ತೋಟಗಾರಿಕೆ ಅಭಿವೃದ್ಧಿ ಸಂಬಂಧ ಚರ್ಚಿಸಲು ಖವಾಜಾ ನವೀದ್ ಅಹ್ಮದ್ ಎಂಬುವರನ್ನು ಕರೆಸಲಾಗಿತ್ತು. ಅವರು ಪಾಕಿಸ್ತಾನದ ಅಭಿವೃದ್ಧಿ ಬಗ್ಗೆ ವಿಸ್ತರಿಸಲು ಬಾಳೆಹಣ್ಣಿನ ಉದಾಹರಣೆ ಕೊಡಲು ಪ್ರಾರಂಭಿಸಿದರು. ಪಾಕಿಸ್ತಾನ ಮತ್ತು ಭಾರತದಲ್ಲಿ ಬೆಳೆಯಲಾಗುವ ಬಾಳೆಹಣ್ಣುಗಳ ನಡುವಿನ ವ್ಯತ್ಯಾಸ ಹೇಳತೊಡಗಿದರು. ಮುಂಬೈನಲ್ಲಿ ಬೆಳೆಯುವ ಬಾಳೆ ಹಣ್ಣುಗಳ ಗಾತ್ರವೂ ದೊಡ್ಡದಾಗಿದ್ದು, ಪರಿಮಳವೂ ಅದ್ಭುತವಾಗಿರುತ್ತದೆ. ಒಳ್ಳೆಯ ಗುಣಮಟ್ಟದ ಹಣ್ಣುಗಳಾಗಿವೆ. ಒಂದು ಕೋಣೆಯಲ್ಲಿ ಆರೇ ಬಾಳೆಹಣ್ಣುಗಳನ್ನು ಇಟ್ಟರೂ ಸಾಕು ಇಡೀ ಕೋಣೆ ಬಾಳೆಹಣ್ಣಿನ ಪರಿಮಳದಿಂದ ತುಂಬಿಹೋಗುತ್ತದೆ ಎಂದು ವಿವರಿಸಿದ ಅವರು, ಬಾಂಗ್ಲಾದೇಶದ ಢಾಕಾದಲ್ಲಿ ಮತ್ತು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ಬೆಳೆಯುವ ಬಾಳೆಹಣ್ಣುಗಳ ಬಗ್ಗೆ ವಿವರಿಸುತ್ತ, ಅವುಗಳ ಗಾತ್ರವನ್ನು ಕೈಸನ್ನೆ ಮೂಲಕ ತೋರಿಸಿದರು. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಮಣ್ಣಿನ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ಆಗಬೇಕು. ಇಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು. ಆದರೆ ನಿರೂಪಕಿ ಅಲ್ವೀನಾ ಮಾತ್ರ ಬಿದ್ದುಬಿದ್ದು ನಗುತ್ತಿದ್ದರು. ಕೊನೆಗೆ ನಗು ತಡೆಯಲಾಗದೆ ತಲೆತಗ್ಗಿಸಿ ಕುಳಿತುಬಿಟ್ಟರು.

Related Articles

Latestಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಕಾಲೇಜಿನಲ್ಲಿ ಸರಸ್ವತಿ ಪೂಜೆ ವೇಳೆ ವಿದ್ಯಾರ್ಥಿನಿಯ ಅಶ್ಲೀಲ ನೃತ್ಯ..!

ನ್ಯೂಸ್‌ ನಾಟೌಟ್: ಸರಸ್ವತಿ ಪೂಜೆಯನ್ನು ಪ್ರತಿವರ್ಷ ಬಹಳ ಭಕ್ತಿಪೂರ್ವಕವಾಗಿ ಹಲವು ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ...

ಕ್ರೈಂವಿಡಿಯೋವೈರಲ್ ನ್ಯೂಸ್

ಗಣಿತ ಶಿಕ್ಷಕನನ್ನು ಎಳೆದು ಹಾಕಿ ಹಲವು ಬಾರಿ ಕಪಾಳಮೋಕ್ಷ ಮಾಡಿದ ಸ್ಕೂಲ್‌ ಪ್ರಿನ್ಸಿಪಾಲ್..!‌ ವಿಡಿಯೋ ವೈರಲ್‌

ನ್ಯೂಸ್‌ ನಾಟೌಟ್: ತರಗತಿಯಲ್ಲಿ ಅನುಚಿತ ವರ್ತನೆ ತೋರಿದರೆಂದು ಗಣಿತ ಶಿಕ್ಷಕನಿಗೆ ಸ್ಕೂಲ್‌ ಪ್ರಿನ್ಸಿಪಾಲ್‌ 18 ಬಾರಿ...

@2025 – News Not Out. All Rights Reserved. Designed and Developed by

Whirl Designs Logo