ಕರಾವಳಿ

ಉಮ್ಮರ್ ಬೀಜದಕಟ್ಟೆ ತಂಡಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಶಸ್ತಿ

812

ಬೆಂಗಳೂರು : ಏಷ್ಯಾ-ಪೆಸಿಫಿಕ್ ಎಚ್ ಆರ್ ಎಂ ವತಿಯಿಂದ ನಡೆಸಿದ “ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಅವಿಷ್ಕಾರಗಳು” ಪ್ರಶಸ್ತಿಗೆ ಪ್ರತಿಷ್ಠಿತ ಔಷಧಿ ಕಂಪನಿಯಾದ ಫಾರ್ಮೆಡ್ ಲಿಮಿಟೆಡ್ ಆಯ್ಕೆಯಾಗಿದೆ.

ಅಕ್ಟೋಬರ್ 26ರಂದು ಬೆಂಗಳೂರಿನ  ಹೋಟೆಲ್ ತಾಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯನಿರ್ವಾಹಕ ಉಪಾಧ್ಯಕ್ಷರು ತರಬೇತಿ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಗೂನಡ್ಕದ ಡಾ. ಉಮ್ಮರ್ ಬೀಜದಕಟ್ಟೆಯವರು ತನ್ನ ಸಹೋದ್ಯೋಗಿಗಳಾದ ವಿಕ್ರಮ್ ಸಾಗರ್ ಸಕ್ಸೇನಾ ಮತ್ತು ಆರಿಸ್ ಪಿ ಎಂ (ಡಿಜಿಎಂ – ಎಚ್.ಆರ್) ರವರು ಪ್ರಸ್ತುತ ಪಡಿಸಿದ “ಫಾರ್ಮೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಆವಿಷ್ಕಾರಗಳು ಮತ್ತು ಮೈಲಿಗಲ್ಲುಗಳು” ವಿಷಯದ ಬಗ್ಗೆ ಸೆಮಿನಾರ್ ನೀಡಿದರು. ಕರೋನಾ ಸಂದರ್ಭದಲ್ಲಿ ಫಾರ್ಮೆಡ್ ಸಂಸ್ಥೆ ಉದ್ಯೋಗಿಗಳನ್ನು ನೋಡಿಕೊಂಡ ರೀತಿ, ಕೋವಿಡ್ ನಿರ್ವಹಣೆಯನ್ನು ಶ್ಲಾಘಿಸಿದ ತೀರ್ಪುಗಾರರ ತಂಡ ಈ ಪ್ರಶಸ್ತಿ ಘೋಷಿಸಿರುವುದಾಗಿ ಪ್ರಕಟಿಸಿದ್ದಾರೆ. ಅನೇಕ ಕೈಗಾರಿಕೋದ್ಯಮಿಗಳು, ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದ ಅನೇಕ ಹಿರಿಯರು ಉಪಸ್ಥಿತರಿದ್ದರು.

See also  ವಯನಾಡು ಭೂ ಕುಸಿತದಲ್ಲಿ ಕರ್ನಾಟಕ ಮೂಲದ ಇಬ್ಬರ ಸಾವು, ಮತ್ತಿಬ್ಬರು ನಾಪತ್ತೆ..! ಸಾವಿನ ಸಂಖ್ಯೆ 123ಕ್ಕೆ ಏರಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget