ನ್ಯೂಸ್ ನಾಟೌಟ್: ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇ ಯಲ್ಲಿ ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಯುವಕರಿಬ್ಬರು ಅರೆಬೆತ್ತಲಾಗಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಒಂದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಹೆದ್ದಾರಿಯಲ್ಲಿ ಚಲಿಸುತ್ತಿರುವಂತೆ ಓರ್ವ ಯುವಕ ಅರೆಬೆತ್ತಲಾಗಿ ರಿಕ್ಷಾದ ಮೇಲೇರಿ ಸ್ಟಂಟ್ ಮಾಡಿದರೆ, ಇನ್ನೋರ್ವ ರಿಕ್ಷಾದ ಬದಿಯ ರಾಡ್ ಹಿಡಿದು ಸ್ಟಂಟ್ ಮಾಡಿದ್ದಾನೆ ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕ ಹುಡುಗರ ಹುಚ್ಚಾಟವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
नोएडा-ग्रेटर नोएडा एक्सप्रेसवे पर पिंक ऑटो की छत पर अर्धनग्न युवकों ने किया खतरनाक स्टंट।
pic.twitter.com/hMrUZbZbsR— Greater Noida West (@GreaterNoidaW) April 1, 2025
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನೋಯ್ಡಾ ಪೊಲೀಸರು ಕಾರ್ಯಾಚರಣೆ ನಡೆಸಿ ರಿಕ್ಷಾ ಮತ್ತು ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ಆದರೆ ಸ್ಟಂಟ್ ಮಾಡಿದ ಇಬ್ಬರು ಯುವಕರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ರಿಕ್ಷಾ ಚಾಲಕನಿಗೆ ರೂ. 33500 ದಂಡ ವಿಧಿಸಿರುವುದಾಗಿ ಹೇಳಿದ್ದಾರೆ.