Uncategorized

ಆಟೊ ಪ್ರಯಾಣ ₹ 5 ಹೆಚ್ಚಳ: ಡಿಸೆಂಬರ್ 1ರಿಂದ ಹೊಸ ದರ ಅನ್ವಯ

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರವನ್ನು ಹಾಲಿ ದರಕ್ಕಿಂತ ₹ 5 ಹೆಚ್ಚಳ ಮಾಡಲಾಗಿದ್ದು, ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಸದ್ಯ 1.9 ಕಿ.ಮೀ ಸಂಚಾರಕ್ಕೆ ₹ 25 ದರವಿತ್ತು. ಇದೀಗ 2 ಕಿ.ಮೀ ಸಂಚಾರಕ್ಕೆ ₹ 30 ನಿಗದಿ ಮಾಡಲಾಗಿದೆ. ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.ಹೊಸ ವಾಹನದ ಮುಖ ಬೆಲೆ, ಸಾರಿಗೆ ಇಲಾಖೆ ಶುಲ್ಕಗಳು, ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಆಗಿದೆ. ಲಾಕ್‌ಡೌನ್‌ನಿಂದ ಆಟೊ ಚಾಲಕ ಜೀವನ ನಿರ್ವಹಣೆಗೆ ತೊಂದರೆ ಆಗಿದೆ. ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಈಗಾಗಲೇ ದರ ಹೆಚ್ಚಳ ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಹಾಗೂ ಆಟೊ ಚಾಲಕರ ಸಂಘಗಳ ಮನವಿ ಪರಿಶೀಲಿಸಿ, ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನಿಗದಿತ ಪರಿಷ್ಕೃತ ದರ ಪಟ್ಟಿಯನ್ನು ಚಾಲಕರು ತಮ್ಮ ಆಟೊದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರಗಳಿಗೆ ತಕ್ಕಂತೆ ಮೀಟರ್‌ಗಳ ಅಂಕಿಗಳನ್ನು ಮಾರ್ಪಡಿಸಿ 2022ರ ಫೆಬ್ರವರಿ 28ರೊಳಗೆ (90 ದಿನಗಳು) ಪುನಃ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದೂ ಹೇಳಲಾಗಿದೆ.

Related posts

‘ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ಹಿಜಾಬ್ ನಿಷೇಧ ಕುರಿತಂತೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಬೇಡಿ’ ಸಿಎಂಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಹಾಸನ ಆಸ್ಪತ್ರೆಯಲ್ಲಿ 24 ನವಜಾತ ಶಿಶುಗಳಿದ್ದ ಐಸಿಯು ವಾರ್ಡ್‌ನಲ್ಲಿ ಅಗ್ನಿ ಅವಘಡ..!ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಶಿಶುಗಳನ್ನು ರಕ್ಷಿಸಿದ್ದೇಗೆ..?

ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 79ನೇ ಜಯಂತ್ಯುತ್ಸವ, ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ