ಮಂಗಳೂರು: ಮಂಗಳೂರಿನಲ್ಲಿ ಇಬ್ಬರು ಸಹೋದರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಅಝೀಮ್, ಆಶಿಕ್ ಹಲ್ಲೆಗೊಳಗಾದ ಯುವಕರಾಗಿದ್ದು,ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಝೀಮ್ಗೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಧೈರ್ಯವಿದ್ದರೆ ಗುಡ್ಡೆ ಮೈದಾನದ ಬಳಿ ಬರುವಂತೆ ಸವಾಲೆಸೆದಿದ್ದ. ಬಳಿಕ ವಿಷಯವನ್ನು ಅಝೀಮ್ ತನ್ನ ಸಹೋದರ ಆಶಿಕ್ ಗೆ ತಿಳಿಸಿದ್ದಾನೆ. ಆಶಿಕ್ ಸಹೋದರನನ್ನು ಕರೆದುಕೊಂಡು ಗುಡ್ಡೆ ಮೈದಾನದ ಬಳಿ ತೆರಳಿದಾಗ ಸುಮಾರು 20ಕ್ಕೂ ಅಧಿಕ ಮಂದಿಯ ತಂಡ ದೊಣ್ಣೆ, ಕಲ್ಲು, ಹೆಲ್ಮೆಟ್ ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.