ಕರಾವಳಿ

ಗುತ್ತಿಗಾರು: ಅಡಿಕೆ ಕದ್ದ ಅಪ್ರಾಪ್ತನಿಗೆ ಹಲ್ಲೆ, 10 ಮಂದಿ ಮೇಲೆ ಎಫ್‌ಐಆರ್

831

ಗುತ್ತಿಗಾರು: ಇಲ್ಲಿನ ಪುರ್ಲುಮಕ್ಕಿಯಲ್ಲಿ ಕಳೆದ ವಾರ ಹಣ್ಣಡಿಕೆ ಕದ್ದ ಆರೋಪದಲ್ಲಿ ಹಲ್ಲೆಗೊಳಗಾದ ಬಾಲಕನಿಂದ ಮಕ್ಕಳ ಕಲ್ಯಾಣ ಸಮಿತಿಗೆ ದೂರು ಹೋಗಿದ್ದು ಈ ಹಿನ್ನೆಲೆಯಲ್ಲಿ 10 ಜನರ ಮೇಲೆ ಎಫ್ಐಆರ್ ದಾಖಲಾದ ಬಗ್ಗೆ ವರದಿಯಾಗಿದೆ.

ಗುತ್ತಿಗಾರಿನ ವೇಣುಗೋಪಾಲ ಎಂಬ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಹಲ್ಲೆ ಮಾಡಲಾಗಿತ್ತೆನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಗ್ರೂಪ್ ಗಳಲ್ಲಿ ಹರಿಯ ಬಿಡಲಾಗಿತ್ತು. ಇದು ಪೊಲೀಸರಿಗೆ ದೊರೆತಿದ್ದು ಇದರ ಆಧಾರದಲ್ಲಿ ಮತ್ತು ಬಾಲಕನ ಪೋಷಕರು ನೀಡಿದ ದೂರಿನನ್ವಯ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ದಿನೇಶ್, ಈಶ್ವರ್, ಚಂದ್ರ, ಚೇತನ್ ಎಂಬವರ ಮೇಲೆ ಎಫ್ಐಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ.

See also  ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget