ಅಡಿಕೆ ಎಲೆ ಹಳದಿ ರೋಗದ ಸಮಗ್ರ ಸಂಶೋಧನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ

4

ಸುಳ್ಯ : ಅಡಿಕೆ ಎಲೆ ಹಳದಿ ರೋಗದಿಂದ ಈ ಭಾಗದ ರೈತರು ಸಂಕಷ್ಟಕೊಳಾಗಿರುವುದು ನಿಜ. ಈ ನಿಟ್ಟಿನಲ್ಲಿ ಅಡಿಕೆ ಎಲೆ ಹಳದಿ ರೋಗಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನದಲ್ಲಿ ಸಮಗ್ರ ಸಂಶೋಧನೆ ನಡೆಸಲಾಗುವುದೆಂದು ಕೇಂದ್ರ ಕೃಷಿ ಸಚಿವೆ ಹಾಗೂ ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸುಳ್ಯದ ದುರ್ಗಾರಮೇಶ್ವರಿ ಕಲಾಮಂದಿರದಲ್ಲಿ ಸುಳ್ಯ ಬಿಜೆಪಿ ಮಂಡಲ ಇದರ ವತಿಯಿಂದ ಸನ್ಮಾನ ಹಾಗೂ ಮನವಿ ಸ್ವೀಕರಿಸಿ ಮಾತನಾಡಿದರು. ಅಡಿಕೆ ಎಲೆಹಳದಿ ರೋಗದಿಂದ ಅರ್ಥಿಕ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಲಾಗುವುದು. ಅರಗ ಜ್ಞಾನೇಂದ್ರರ ನೇತ್ರತ್ವದಲ್ಲಿ‌ ಸಮಿತಿಯೊಂದನ್ನು ರಚಿಸಿ‌ ಅವರ ವರದಿಯನ್ನು ತರಿಸಿಕೊಂಡು ಅನುಷ್ಠಾನಗೊಳಿಸಲಾಗುವುದು. ತೆಂಗಿನ ಉತ್ಪಾದನೆಯ ರಪ್ತಿಗಿದ್ದ ನಿಷೇದ ವನ್ನು ಕೇಂದ್ರ ಸರಕಾರ ಈಗ ತಗೆದು ಹಾಕಿದೆ. ಸ್ಥಳೀಯವಾಗಿ ತೆಂಗಿನ ಸಂಸ್ಕರಣ ಘಟಕ‌ ಹಾಗೂ ತೆಂಗಿನ ಉಪ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಿ ಆ ಮೂಲಕ ತೆಂಗು ಬೆಳೆಗಳನ್ನು ಉತ್ತೇಜಿಸಲಾಗುವುದು. ಅಲ್ಲದೆ ತೆಂಗು ಬೆಳೆಗಾರ ಸಂಘ ಸ್ಥಾಪಿಸಿ ಸಂಘದ ಮೂಲಕ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ಹೇಳಿದರು.

ಸಚಿವ ಅಂಗಾರ ಹಾಗೂ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಅಡಿಕೆ ಎಲೆ ಹಳದಿ ರೋಗದ ಸಂಶೋಧನೆ ಮಾಡಿ ಪರಿಹಾರ ಒದಗಿಸಬೇಕು. ರಬ್ಬರ್ ಆಮದು ನಿಲ್ಲಿಸಬೇಕು. ತೆಂಗು ಸಂಸ್ಕರಣಾ ಘಟಕ ಹಾಗೂ ಉಪ ಉತ್ಪನ್ನ ಘಟಕ ಸ್ಥಾಪಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟರು.

Related Articles

Uncategorizedಕ್ರೈಂರಾಜ್ಯವೈರಲ್ ನ್ಯೂಸ್

ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..! ಆರೋಪಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್: ಶೀಲ ಶಂಕಿಸಿ ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಆನೇಕಲ್ ಹೆಬ್ಬಗೋಡಿ...

Uncategorizedಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್..!​ ಪೊಲೀಸ್ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ಸ್ಥಳೀಯರು..!

ನ್ಯೂಸ್ ನಾಟೌಟ್: ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಚೆನ್ನೈನ...

Uncategorizedಕ್ರೈಂರಾಜ್ಯವೈರಲ್ ನ್ಯೂಸ್

ರಥೋತ್ಸವದ ವೇಳೆ ಗುರುಬಸವೇಶ್ವರ ರಥದ ಸ್ಟೇರಿಂಗ್ ಕಟ್..! ಸ್ಕೂಟಿ ಹಾಗೂ ಬೈಕ್‌ ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿ..!

ನ್ಯೂಸ್ ನಾಟೌಟ್ : ವಿಜಯನಗರ ಜಿಲ್ಲೆಯ ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅವಘಡ ಸಂಭವಿಸಿದ್ದು,...

@2025 – News Not Out. All Rights Reserved. Designed and Developed by

Whirl Designs Logo