ಕರಾವಳಿ

ಅರಂತೋಡು: ಬಟ್ಟೆ ಒಗೆಯಲೆಂದು ಹೋಗಿದ್ದ ಮಹಿಳೆ ನಾಪತ್ತೆ , ಹುಡುಕಾಟ ಶುರು

ಅರಂತೋಡು : ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ನಾಪತ್ತೆಯಾದ ಘಟನೆ ಅರಂತೋಡು ಗ್ರಾಮದ ಉಳುವಾರಿನಿಂದ ವರದಿಯಾಗಿದೆ. ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಇದುವರೆಗೆ ಮನೆಗೆ ಹಿಂತಿರುಗಲಿಲ್ಲ. ನಿನ್ನೆ ರಾತ್ರಿಯಿಂದ ಅರಂತೋಡು, ಗ್ರಾಮಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಇಂದು ಬೆಳಿಗ್ಗಿನಿಂದಲೇ ಹುಡುಕಾಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಸುರತ್ಕಲ್‌: ಅಡುಗೆ ಮನೆ ಗ್ಯಾಸ್‌ ಸೋರಿಕೆಯಾಗಿ ಮಹಿಳೆಯರ ಮೇಲೆ ಹೊತ್ತಿಕೊಂಡ ಬೆಂಕಿ..! ಮೈಗೆ ಅಂಟಿದ್ದ ಸೀರೆಯನ್ನು ಕತ್ತರಿಸಿ ರಕ್ಷಿಸಿದ ಸ್ಥಳೀಯರು..!

ಸುಳ್ಯದಲ್ಲಿ ಅಪರೂಪದ ಹಾರುವ ಅಳಿಲು ಪತ್ತೆ

ನವೋದಯಕ್ಕೆ ಪ್ರೇಕ್ಷಾ ತೇರ್ಗಡೆ