ಕರಾವಳಿ

ಅರಂತೋಡು: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಸೃಷ್ಟಿಯಾದ ಬೃಹತ್ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

943

ಅರಂತೋಡು: ಇಲ್ಲಿನ ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಗೋಡಾನ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ  ರಸ್ತೆಯ ನಡುವಿನಲ್ಲಿ ನೀರು ತುಂಬಿದ ಬೃಹತ್ತಾದ ಗುಂಡಿ ಸೃಷ್ಟಿಯಾಗಿದೆ. ವಾಹನ ಸವಾರರು ಚಾಲನೆ ಮಾಡುವಾಗ ಜಾಗೃತೆ ವಹಿಸದೇ ಹೋದರೆ ಭಾರಿ ಅವಘಡ ಸಂಭವಿಸುವ ಸಾಧ್ಯತೆ. ಇದೀಗ ಆ ಗುಂಡಿಗೆ ಸ್ಥಳೀಯರು ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಇನ್ನಾದರೂ ರಾಜ್ಯ ಹೆದ್ದಾರಿ ಇಲಾಖೆಯವರು ಎಚ್ಚೆತ್ತು ಕ್ರಮ ಕೈಗೊಳ್ಳಬಹುದೇ? ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಇಂತಹ ಗುಂಡಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಮಡಿಕೇರಿಯ ಪ್ರಾಧ್ಯಾಪಕನ ಹೆಸರು..!,ಯಾರಿವರು? ಇವರ ಸಾಧನೆಯೇನು ಗೊತ್ತಾ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget