ಸುಳ್ಯ

ಅರಂತೋಡು: ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ

526
Spread the love

ಅರಂತೋಡು : ದೇಶದ ಜನತೆಗೆ 100 ಕೋಟಿ ಕೋವಿಡ್ ವ್ಯಾಕ್ಷಿನ್ ಹಾಕಿ ಗುರಿ ಸಾಧಿಸಿದ ಪ್ರಯುಕ್ತ ಕೋವಿಡ್ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದಿಸುವ ಕಾರ್ಯಕ್ರಮ ಬಿ. ಜೆ. ಪಿ. ಮಂಡಲ ಸಮಿತಿಯ ವತಿಯಿಂದ  ಆರಂತೋಡು ಪ್ರಾಥಮಿಕ ಕೇಂದ್ರದಲ್ಲಿ ನಡೆಯಿತು. ಬಿಜೆಪಿ. ಮಂಡಲ ಸಮಿತಿಯ ಕೋಶಾಧಿಕಾರಿ ಶ್ರೀ ಶಿವಾನಂದ ಕುಕ್ಕುಂಬಳರವರು ಎಲ್ಲರನ್ನೂ ಸ್ವಾಗತಿಸಿದರು.

ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ದೇಶದ ನೆಚ್ಚಿನ ಪ್ರಧಾನಿ ಮೋದಿಯವರ ಅಭಿಲಾಷೆಯಂತೆ ಕೋವಿಡ್ ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಿರುವ ವೈದ್ಯರು, ದಾದಿಯರು, ಆಶಾಕಾರ್ಯಕರ್ತರು, ಮತ್ತು ಸ್ಥಳೀಯ ಜನಪ್ರತಿನಿದಿನಗಳಿಗೆ ಧನ್ಯವಾದಗಳನ್ನು ಹೇಳುವುದರೊಂದಿಗೆ, ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ. ಡಿ. ಡಿ. ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಾಯ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕತ್ಲಡ್ಕ ಮಾಜಿ ಉಪಾಧ್ಯಕ್ಷರಾದ ಪುಷ್ಪ ಮೇದಪ್ಪ, ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಗೀತಾ ಶೇಖರ್, ಮಂಡಲ ಸಮತಿ ಸದಸ್ಯೆ ಭಾರತೀ ಪುರುಷೋತ್ತಮ್, ಉಳುವಾರು ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ ,ಅರಂತೋಡು ಪಂಚಾಯತ್ ಸದಸ್ಯರಾದ ಮಾಲಿನಿ ವಿನೋದ್, ವೆಂಕಟ್ರಮಣ ಪೆತ್ತಾಜೆ ಹಾಗೂ ಅರಂತೋಡು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಕೇಶವ ಅಡ್ತಲೆ ಉಪಸ್ಥಿತರಿದ್ದರು.

See also  ಪತ್ರಕರ್ತರ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಉದ್ಯಮಿ ಆರ್ ಕೆ ನಾಯರ್ ಭೇಟಿ: ಒಂದು ಲಕ್ಷ ರೂ. ಕೊಡುಗೆ
  Ad Widget   Ad Widget   Ad Widget   Ad Widget   Ad Widget   Ad Widget