ಸುಳ್ಯ

ಅರಂತೋಡು: 75 ನೇ ಸ್ವಾತಂತ್ರ್ಯ ದಿನಾಚರಣೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ವಿತರಣಾ ಕಾರ್ಯಕ್ರಮ

ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿ ವಿತರಣಾ ಕಾರ್ಯಕ್ರಮ ಅರಂತೋಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು .ಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೇರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪಂಚಾಯತ್ ಅಧ್ಯಕ್ಷೆ ಹರಿಣಿ ವಹಿಸಿದರು.   ಮುಖ್ಯ ಅತಿಥಿಯಾಗಿ ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸಂಚಾಲಕರಾದ ಕೆ.ಆರ್ ಗಂಗಾಧರ್ ಮಾತನಾಡಿ ನಮ್ಮೂರಿನಲ್ಲಿ ಬಡತನ ನಿರ್ಮೂಲನೆ ವಾಗಿದೆ.ಇಂದು ಜಾತಿ ಧರ್ಮ ದ ಕಚ್ಚಾಟ ಹಗಲು ಹೊತ್ತಿನ ದರೋಡೆ ಕೊಲೆಗೆ ಕಡಿವಾಣ ಹಾಕಬೇಕು.ನಮ್ಮ ಕನಸನ್ನು ಇಡೆರಿಸಲು ಪಣತೊಡಬೇಕು.ಎಂದು ಹೇಳಿದರು ,ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ  ಸಂತೋಷ್ ಕುತ್ತಮೊಟ್ಟೆ ಮಾತನಾಡಿ,  ಹಿರಿಯರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಫಲವಾಗಿ ಇವತ್ತು ನಾವು ಎಪ್ಪತ್ತೈದನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆ ಚರಿಸಲು ಸಾಧ್ಯವಾಯಿತು.ದೇಶದ ರಕ್ಷಣೆಗೆ ಗಡಿಗಳ ಲ್ಲಿ ಸೈನಿಕರ ನಡೆಸುವ ಹೋರಾಟವನ್ನು ಶ್ಲಾಘನೀಯ ಕಾರ್ಯ ಎಂದು ಹೇಳಿದರು.  ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ಮಾತನಾಡಿ  ನಾವೆಲ್ಲಾ  ಭಾರತೀಯರು ಜಾತಿ ಧರ್ಮ ಮತ  ಎಂದು ಹೇಳಿ  ಕಚ್ಚಾಟ  ಮಾಡದೇ  ಸೌಹಾರ್ಧತೆ ಯಿಂದ ಬಾಳಬೇಕು.ಎಂದು ಹೇಳಿದರು , ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಕಿಶೋರ್ ಉಳುವಾರು  ಮಾತನಾಡಿ  ನಾನೇನು ದೇಶಕ್ಕಾಗಿ ಎನು ಮಾಡಿದೇ ನಮ್ಮಿಂದ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು. ಅದರಂತೆ ಪಂಚಾಯತ್ ವತಿಯಿಂದ  ನಡೆಯುವ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು  ,ಅರಂತೋಡು ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಅಧ್ಯಕ್ಷ ಶಿವಾನಂದ ಕುಕ್ಕುಂಬಳ,ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ,ಕೆ.ಆರ್.ಪದ್ಮನಾಭ ,ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೇದಪ್ಪ,   ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ರಮೇಶ್,ನೆಹರು ಸ್ಮಾರಕ ಕಾಲೇಜು ಮುಖ್ಯೋಪಾಧ್ಯಾಯ  ಸೀತಾರಾಮ ,  ,ಗೋಪಾಲಕೃಷ್ಣ ಬನ ಮಾಜಿ ಸೈನಿಕರಾದ ಜನಾರ್ಧನ ,ಫಸೀಲು ,ಅಶಾ ಕಾರ್ಯಕರ್ತರು,ಅಂಗನವಾಡಿ ಮೇಲ್ವಿಚಾರಕರು,  ಪಂಚಾಯತ್ ಸದಸ್ಯರು ,ಸಹಕಾರಿ ಸಂಘದ ನಿರ್ದೇಶಕರು , ಟಾಸ್ಕ ಪೊರ್ಸ್ ಸಮಿತಿ ಸದಸ್ಯರು  ಶಾಲಾ ವಿಧ್ಯಾರ್ಥಿಗಳು  ಹಾಗೂ ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.   ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಸಿ ವಿತರಣಾ ಕಾರ್ಯಕ್ರಮವನ್ನು ಅಯೋಜಿಸಲಾಯಿತು.ನಂತರ ಅರಂತೋಡು ಪೇಟೆಯಲ್ಲಿ   ಸ್ವಚ್ಛಗೊಳಿಸುವ ಕಾರ್ಯ ಮಾಡಲಾಯಿತು.    ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್.ಆರ್.ಜಯಪ್ರಕಾಶ್ ಸ್ವಾಗತಿಸಿದರು.

Related posts

ಸುಳ್ಯ:ಕೋಳಿ ಸಾರಿಗಾಗಿ ಅಪ್ಪ-ಮಗನ ಕಿತ್ತಾಟ,ಮಗನ ದುರಂತ ಅಂತ್ಯ

ಸುಬ್ರಹ್ಮಣ್ಯ:ಶಾರ್ಟ್ ಸರ್ಕ್ಯೂಟ್‌ನಿಂದ ಕ್ವಾಲಿಸ್‌ನಲ್ಲಿ ಧಗಧಗನೆ ಉರಿದ ಬೆಂಕಿ,ಮುಂದೇನಾಯ್ತು?

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆ, ಕಾಲೇಜಿಗೆ ನಾಳೆ(ಜು.18) ರಜೆ, ಎಲ್ಲೆಲ್ಲಿ ರಜೆ..? ಇಲ್ಲಿದೆ ಡಿಟೇಲ್ಸ್