Latest

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಆರೋಗ್ಯದಲ್ಲಿ ಏರುಪೇರು..!, ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ

561
Spread the love

ನ್ಯೂಸ್ ನಾಟೌಟ್: ಆಸ್ಕರ್ ವಿಜೇತ, ಭಾರತ ಸಿನಿಮಾ ಸಂಗೀತ ಕ್ಷೇತ್ರದ ದಿಗ್ಗಜ ಎಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಎಆರ್ ರೆಹಮಾನ್ ಅವರಿಗೆ ಇಂದು ಬೆಳಿಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದೆ. ಶೀಘ್ರವೇ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7:30ಕ್ಕೆ ಎ.ಆರ್ ರೆಹಮಾನ್ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಎಆರ್ ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಹಲವು ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅವರ ಹೃದಯನಾಳದ ಕೆಲವೆಡೆ ಬ್ಲಾಕೇಜ್​ಗಳು ಇರುವುದು ಪರೀಕ್ಷೆಗಳಿಂದ ತಿಳಿದುಬಂದಿದ್ದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಂತೆ ಎಆರ್ ರೆಹಮಾನ್​ ಅವರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಇನ್ನೂ ಕೆಲ ದಿನ ಅಪೋಲೊ ಆಸ್ಪತ್ರೆಯಲ್ಲಿಯೇ ಕಳೆಯಲಿರುವ ಎಆರ್ ರೆಹಮಾನ್ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

See also  ಗಲಾಟೆಯಾಗಿದೆ,ನಂಗೆ ಪೆಟ್ಟಾಗಿದೆ ಎಂದು ಆಂಬುಲೆನ್ಸ್ ಗೆ ಕರೆ ಮಾಡಿದ ಕುಡುಕ!! ಸ್ಥಳಕ್ಕಾಗಮಿಸಿದ 108 ಚಾಲಕ ಮತ್ತು ಪೊಲೀಸರಿಗೆ ಸವಾಲ್!!ಏನದು?
  Ad Widget   Ad Widget   Ad Widget   Ad Widget   Ad Widget   Ad Widget