ಸುಳ್ಯ

ಗುತ್ತಿಗಾರಿನಲ್ಲಿ ವಿದ್ಯುತ್ ಸಬ್ ಸ್ಟೇಶನ್ ಗೆ ಸಚಿವ ಅಂಗಾರ ಪ್ರಾಯೋಗಿಕ ಚಾಲನೆ

638
Spread the love

ಸುಳ್ಯ : ಗುತ್ತಿಗಾರಿನ  ಬಹುದಿನಗಳ ಬೇಡಿಕೆಯಾಗಿದ್ದ 33/11ಕೆವಿ ವಿದ್ಯುತ್ ಸಬ್ ಸ್ಟೇಶನ್ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ದ.ಕ ಜಿಲ್ಲಾ ಉಸ್ತುವಾರಿ  ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಪ್ರಾಯೋಗಿಕ ಚಾಲನೆ ನೀಡಿದರು.  

ಬೆಳ್ಳಾರೆಯಿಂದ ಗುತ್ತಿಗಾರಿಗೆ ಹೊಸದಾಗಿ ಅಳವಡಿಸಿರುವ ವಿದ್ಯುತ್ ಲೈನ್  ಬಾಳಿಲ, ನಿಂತಿಕಲ್ಲು, ಪಂಜ, ಬಳ್ಳಕ್ಕ ಮಾರ್ಗವಾಗಿ ಗುತ್ತಿಗಾರಿನ ಮೊಗ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಬ್ ಸ್ಟೇಶನ್ ಗೆ ಸಂಪರ್ಕಗೊಳ್ಳಲಿದೆ.  ಈ ವೇಳೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ನಿರ್ದೇಶಕಿ ಪದ್ಮಾವತಿ , ಮುಖ್ಯ ಇಂಜಿನಿಯರ್ ಪುಷ್ಪಾವತಿ, ಅಧೀಕ್ಷಕ ಇಂಜಿನಿಯರ್ ಮಂಜಪ್ಪ,  ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ , ಸುಬ್ರಹ್ಮಣ್ಯ ಉಪವಿಭಾಗದ ಎಇಇ ಚಿದಾನಂದ, ಸುಳ್ಯ ಎಇಇ ಹರೀಶ್ ನಾಯ್ಕ್, ಗುತ್ತಿಗಾರು ಶಾಖಾ ಜೆಇ ಲೋಕೇಶ್ ಎಣ್ಣೆಮಜಲು, ಬೆಳ್ಳಾರೆ ಜೆಇ ಪ್ರಸಾದ್, ಪಂಜ ಜೆಇ ಹರಿಕೃಷ್ಣ, ಕಡಬ ಜೆಇ ಸತ್ಯನಾರಾಯಣ, ಸಿವಿಲ್ ಜೆಇ ಸುನಿಲ್, ಗುತ್ತಿಗೆದಾರರಾದ ಜ್ಯೋತಿ ಇಲೆಕ್ಟ್ರೀಕಲ್ ನ ಸೂರ್ಯನಾರಾಯಣ, ಕಾಮಗಾರಿ ನಿರ್ವಹಿಸಿದ ಸುಧಾ ಇಲೆಕ್ಟ್ರೀಕಲ್ ಬಾಲಕೃಷ್ಣ ಕೊಳತ್ತಾಯ,  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ ಮುಳಿಯ ಕೇಶವ ಭಟ್, ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

See also  ಕಲ್ಲುಗುಂಡಿ: ಏ.26ರಂದು ಲೋಕಸಭಾ ಚುನಾವಣೆ ಹಿನ್ನಲೆ , ಚೆಕ್‌ ಪೋಸ್ಟ್‌ ನಲ್ಲಿ ವಾಹನಗಳ ತಪಾಸಣೆ ಕಾರ್ಯ ಬಿರುಸು
  Ad Widget   Ad Widget   Ad Widget   Ad Widget   Ad Widget   Ad Widget