ಬೆಂಗಳೂರು: ಪ್ರಾಕೃತಿಕ ವಿಕೋಪದ ಕಾರಣದಿಂದ ದೋಣಿ ಮುಳುಗಡೆಯಾಗಿ ಮೃತಪಟ್ಟ ಮೀನುಗಾರರ ಕುಟುಂಬ ಸದಸ್ಯರಿಗೆ 6 ಲಕ್ಷ ರೂ. ಪರಿಹಾರ ಒದಗಿಸುವುದಾಗಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನುಗಾರರಿಗೆ 12 ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲಾ ಪಂಚಾಯತ್ ನಿಂದ 4 ಯೋಜನೆಗಳು ಜಾರಿಯಲ್ಲಿವೆ. ಮೀನುಗಾರರ ಅಭಿವೃದ್ಧಿಗೆ ಪೂರಕವಾಗಿ ಅನೇಕ ಯೋಜನೆಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದಲೂ ಅನೇಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೀನುಗಾರರ ಆರ್ಥಿಕ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೂ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ರಾಜ್ಯದ ಮೀನುಗಾರಿಕಾ ಇಲಾಖೆಯಿಂದ ಬಂದರಿನಲ್ಲಿ ದೋಣಿಗಳಿಗೆ ಲಂಗರು ಹಾಕುವುದು, ಮೀನುಗಾರಿಕಾ ಬಂದರು ಅಭಿವೃದ್ಧಿಗಾಗಿ ಈವರೆಗೆ 12.99 ಕೋಟಿ ರೂ. ಗಳನ್ನು ವ್ಯಯಿಸಿರುವುದಾಗಿಯೂ ಹೇಳಿದ್ದಾರೆ.