ಅಮೆರಿಕದಲ್ಲಿ ಪೈಲಟ್ ಆದ ಗುಜರಾತ್‌ ನ ರೈತನ ಮಗಳು, ಮಗಳ ಕನಸಿಗಾಗಿ ಅಪ್ಪ ಮಾಡಿದ ತ್ಯಾಗ ಎಂತಹದ್ದು ಗೊತ್ತಾ?

4

ನ್ಯೂಯಾರ್ಕ್: ಗುಜರಾತಿನ ರೈತನ ಮಗಳು ಕೇವಲ 19 ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಹೆಸರು ಮೈತ್ರಿ ಪಟೇಲ್. ಶಾಲಾ ದಿನಗಳಲ್ಲಿ ವಿಮಾನ ನೋಡಿ ಮುಂದೊಂದು ದಿನ ನಾನೂ ಪೈಲಟ್ ಆಗಬೇಕು ಅನ್ನುವ ಕನಸು ಕಂಡಿದ್ದರು. ಇಂದು ಆ ಕನಸನ್ನು ಅವರು ನನಸು ಮಾಡಿಕೊಂಡಿದ್ದಾರೆ. 2018 ರಲ್ಲಿ ಮೈತ್ರಿ ಪೈಲಟ್ ತರಬೇತಿಗಾಗಿ ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಅವರು 18  ತಿಂಗಳ ತರಬೇತಿ ಪೂರೈಸಿದ್ದರು. ಅಲ್ಲಿಯೇ ವಿಮಾನ ಓಡಿಸುವ ವಾಣಿಜ್ಯ ಪರವಾನಗಿ ಪಡೆದರು. ಮೈತ್ರಿ ಈಗ ಭಾರತದಲ್ಲಿ ವಿಮಾನ ಹಾರಿಸಲು ಬಯಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪರವಾನಗಿ ಪಡೆಯುವುದಕ್ಕೆ ಅವರು ಪ್ರಯತ್ನ ಪಡುತ್ತಿದ್ದಾರೆ.

ಮಗಳ ಕನಸಿಗಾಗಿ ಆಸ್ತಿಯನ್ನೇ ಮಾರಿದ ತಂದೆ

ಮಗಳನ್ನು ಪೈಲಟ್‌ ಮಾಡುವುದಕ್ಕಾಗಿ ಗುಜರಾತ್‌ ನ ರೈತ ಕಾಂತಿಭಾಯಿ ಪಟೇಲ್  ತಮ್ಮೆಲ್ಲ ಆಸೆಗಳನ್ನು ಕಟ್ಟಿಟ್ಟಿದ್ದರು. ದುಬಾರಿ ವೆಚ್ಚದ ತರಬೇತಿಗಾಗಿ ಹಣ ಹೊಂದಿಸುವುದಕ್ಕಾಗಿ ಎಲ್ಲ ಕಡೆಯೂ ಓಡಾಡಿದರು. ಆದರೆ ಅವರಿಗೆ ಎಲ್ಲಿಯೂ ಹಣವೇ ಸಿಗಲಿಲ್ಲ. ಕೊನೆಗೆ ಅವರು ಬೇರೆ ದಾರಿ ಇಲ್ಲದೆ ತಮ್ಮ ಜಮೀನನ್ನೇ ಮಾರಿ ಅಮೆರಿಕದಲ್ಲಿ ಮಗಳಿಗೆ ತರಬೇತಿ ಕೊಡಿಸಿದರು.

Related Articles

Latestಕ್ರೈಂವೈರಲ್ ನ್ಯೂಸ್ಸಾಧಕರ ವೇದಿಕೆ

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ..! ‘ಸುಕ್ರಜ್ಜಿ’ ಎಂದೇ ಖ್ಯಾತರಾಗಿದ್ದ ಜನಪದ ಹಾಡುಗಾರ್ತಿ

ನ್ಯೂಸ್‌ ನಾಟೌಟ್: ಜನಪದ ಹಾಡುಗಾರ್ತಿ, ಮದ್ಯಪಾನ ವಿರೋಧಿ ಹೋರಾಟದ ಮೂಲಕ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಿ...

ಕೆವಿಜಿ ಕ್ಯಾಂಪಸ್‌ಶಿಕ್ಷಣಸಾಧಕರ ವೇದಿಕೆಸುಳ್ಯ

ಜ್ಞಾನಗಂಗೆಯನ್ನು ತಂದ ಭಗೀರಥ…

ನ್ಯೂಸ್ ನಾಟೌಟ್ :”ಜಗತ್ತನ್ನು ತಾನು ಸುತ್ತುವ ಬದಲು, ಜಗತ್ತನ್ನೇ ತನ್ನೆಡೆಗೆ ತಿರುಗುವಂತೆ ಮಾಡಿದ” ಮಹಾನಾಯಕ ಡಾ....

ಕೆವಿಜಿ ಕ್ಯಾಂಪಸ್‌ಮಂಗಳೂರುಸಾಧಕರ ವೇದಿಕೆ

ಕುರುಂಜಿಯವರನ್ನು ನೆನೆದು…

ನ್ಯೂಸ್ ನಾಟೌಟ್ : ಅವರು ಓದಿದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಬೆಳೆದದ್ದು 33 ಎಕರೆ ತೋಟದಲ್ಲಿ...

@2025 – News Not Out. All Rights Reserved. Designed and Developed by

Whirl Designs Logo