ಕ್ರೈಂ

ಕೌಡಿಚಾರ್: ಆಂಬ್ಯುಲೆನ್ಸ್ ಅಪಘಾತ, ತಪ್ಪಿದ ದುರಂತ

347
Spread the love

ಪುತ್ತೂರು: ಇಲ್ಲಿನ ಸಮೀಪದ ಕೌಡಿಚಾರ್ ಎಂಬಲ್ಲಿ ಸುಳ್ಯದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದ ಘಟನೆ ನಡೆದಿದೆ.

ಸುಳ್ಯದಿಂದ ಪುತ್ತೂರು ಕಡೆಗೆ ಉಸಿರಾಟದ ಸಮಸ್ಯೆ ಹೊಂದಿದ್ದ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವೇಗದಲ್ಲಿದ್ದ ಆಂಬುಲೆನ್ಸ್ ಕೌಡಿಚಾರ್ ಬಳಿ ಎದುರಿನಿಂದ ವಾಹನ ಅಡ್ಡ ಬಂದುದರಿಂದ ಡಿಕ್ಕಿ ಸಂಭವಿಸುವುದನ್ನು ತಪ್ಪಿಸಲು ಹೋಗಿ ಆಂಬ್ಯುಲೆನ್ಸ್ ಕಮರಿಗೆ ಉರುಳಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ. ಅದೃಷ್ಟವಷಾತ್ ಕಾರೊಳಗಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರಿನೊಳಗಿದ್ದ ರೋಗಿಯನ್ನು ಮತ್ತೊಂದು ಆಂಬ್ಯುಲೆನ್ಸ್ ನಲ್ಲಿ ಪುತ್ತೂರಿಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.

See also  ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರಗೈದವರ ಬಹುಮಹಡಿ ಕಟ್ಟಡದ ಮೇಲೆ ಬುಲ್ಡೋಜರ್ ಹತ್ತಿಸಿದ ಗೋರಖ್ ಪುರದ ಸಿಂಹ, ಯೋಗಿ ಆದಿತ್ಯನಾಥ್ ಗರ್ಜನೆಗೆ ಅತ್ಯಾಚಾರಿಗಳ ಕಟ್ಟಡಗಳೆಲ್ಲ ಧ್ವಂಸ..!
  Ad Widget   Ad Widget   Ad Widget   Ad Widget   Ad Widget   Ad Widget