ದೇಶ-ಪ್ರಪಂಚ

ಗಂಡನ ಜತೆ ಬಾಳಲು ಹೆಂಡತಿಗೆ ಬಲವಂತ ಸಲ್ಲದು: ಹೈಕೋರ್ಟ್

ಅಹಮದಾಬಾದ್: ಹೆಂಡತಿಯು ಗಂಡನ ಜೊತೆಗೇ ಬಾಳಬೇಕು ಮತ್ತು ದಾಂಪತ್ಯದ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಬಲವಂತ ಮಾಡುವಂತಿಲ್ಲ. ಹೀಗೆ ಮಾಡಬೇಕು ಎಂದು ನ್ಯಾಯಾಲಯ ಕೂಡ ಆದೇಶ ನೀಡುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಪತಿಯು ಎರಡನೇ ಮದುವೆಯಾದರೆ, ಗಂಡನ ಜೊತೆ ಬದುಕಲುಮುಸ್ಲಿಂ ಮಹಿಳೆಯು ನಿರಾಕರಿಸಬಹುದು. ಏಕೆಂದರೆ, ಮುಸ್ಲಿಂ ಕಾನೂನು ಬಹುಪತ್ನಿತ್ವವನ್ನು ಒಪ್ಪುತ್ತದೆಯಾದರೂ ಅದನ್ನು ಪ್ರೋತ್ಸಾಹಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.   ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯು ಗಂಡನ ಹಕ್ಕುಗಳ ಮೇಲೆ ಮಾತ್ರ ಅವಲಂಬಿತ ಅಲ್ಲ. ಗಂಡನ ಜತೆಗೇ ಬಾಳಬೇಕು ಎಂದು ಬಲವಂತ ಮಾಡುವುದು ಹೆಂಡತಿಯನ್ನು ತಾರತಮ್ಯದಿಂದ ನೋಡಿದಂತೆ ಆಗುವುದಿಲ್ಲವೇ ಎಂಬುದನ್ನೂ ಕೌಟುಂಬಿಕ ನ್ಯಾಯಾಲಯಗಳು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನಿರಲ್ ಮೆಹ್ತಾ ಅವರ ಪೀಠವು ಹೇಳಿದೆ. 

Related posts

ಮದುವೆಯಾದ ಮರುದಿನವೇ ಉಕ್ರೇನ್ ಗಾಗಿ ಬಂದೂಕು ಹಿಡಿದ ನವದಂಪತಿ

ಪ್ಯಾಲೆಸ್ಟೇನ್ ಬೆಂಬಲಿಸಿ ಪೋಸ್ಟ್‌ ಮಾಡಿದ ಪೊಲೀಸ್‌ ಕಾನ್‌ಸ್ಟೇಬಲ್‌ ಅಮಾನತ್ತು! ಆತನ ವಿರುದ್ಧ ಪೊಲೀಸ್‌ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದೇಕೆ?

ಪಾನಿಪುರಿ ಪಾನಿಗೆ ಮೂತ್ರ ಮಿಶ್ರಣ: ಕಿಡಿಗೇಡಿ ಬಂಧನ