ಸುಳ್ಯ : ಅಜ್ಜಾವರ ಮಹಿಷ ಮರ್ದಿನಿ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಪುತ್ತೂರು ತಾಲೂಕಿನ ಬೊಳುವಾರು ಅಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ನಿರೀಶ್ವರ ಯಾಗ ಯಕ್ಷಗಾನ ಬಯಲಾಟ ನಡೆಯಿತು. ಭಾಗವತರಾಗಿ ಸುಬ್ರಾಯ ಸಂಪಾಜೆ, ಮದ್ದಳೆಯಲ್ಲಿ ಅಕ್ಷಯ ವಿಟ್ಲ, ಚೆಂಡೆ ಯಲ್ಲಿ ಮುರಳಿಧರ ಕಲ್ಲುರಾಯ, ನಿರ್ದೇಶಕರಾಗಿ ಭಾಸ್ಕರ್ ಬಾರ್ಯ ಪುತ್ತೂರು, ಈಶ್ವರನಾಗಿ ಶುಭ ಜೇ ಸಿ ಅಡಿಗರ್, ದಾಕ್ಷಾಯಣಿಯಾಗಿ ಕಿಶೋರಿ ದುಗ್ಗಪ್ಪ, ದಕ್ಷನಾಗಿ ಶುಭ ಗಣೇಶ್, ವೀರಭದ್ರನಾಗಿ : ಹರಿನಾಕ್ಷಿ ಜೆ. ಶೆಟ್ಟಿ, ವೃದ್ಧ ಬ್ರಾಹ್ಮಣನಾಗಿ ಪ್ರೇಮಲತಾ ಟಿ ರಾವ್ ಭಾಗವಹಿಸಿದರು.