ಕರಾವಳಿ

ಅಜ್ಜಾವರದಲ್ಲಿ ಚಿರತೆ, ಮರಿ ಚಿರತೆ ಪ್ರತ್ಯಕ್ಷ, ಊರವರಲ್ಲಿ ಆತಂಕ, ಅರಣ್ಯ ಇಲಾಖೆ ಮೌನ

ಸುಳ್ಯ: ಅಜ್ಜಾವರ ಗ್ರಾಮದ ಮುಂಡೋಲಿಮೂಲೆ ಸೂರ್ಯ ಎಂಜಿ ಎನ್ನುವವರ ತೋಟದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ತನ್ನ ಮರಿ ಚಿರತೆಯ ಜತೆಗೆ ಗ್ರಾಮದಲ್ಲಿ ಸುತ್ತಾಟ ನಡೆಸುತ್ತಿದೆ. ಸೂರ್ಯ ಅವರ ತೋಟದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಹಾಗೂ ಅದರ ಮರಿ ಗುರುವಾರ ಮನೆ ಕೆಲಸದವನು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮತ್ತೆ ದಾರಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಹಲವು ಜನರಿಗೂ ಕಾಣಿಸಿಕೊಂಡಿದೆ. ಆದರೆ ಅರಣ್ಯಾಧಿಕಾರಿಗಳಾಗಲಿ ಅಥವಾ ಸ್ಥಳೀಯ ಆಡಳಿತಾಧಿಕಾರಿಗಳಾಗಲಿ ಇದುವರೆಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ನ್ಯೂಸ್ ನಾಟೌಟ್ ತಂಡದ ಜತೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಮಂಗಳೂರು:ಹಿಂದೂ ಸಂಘಟನೆ ಹೆಸರಿನಲ್ಲಿ ಮುಸ್ಲಿಂ ಉದ್ಯಮಿಯ ಹನಿಟ್ರ್ಯಾಪ್‌! ಹಲ್ಲೆ ನಡೆಸಿದ 8 ಮಂದಿ ಮಂಗಳೂರಿನಲ್ಲಿ ಅರೆಸ್ಟ್‌!

ಮನೆ ಸಮೀಪ ಹಟ್ಟಿಗೆ ಹೊಕ್ಕ ನಾಗರ ಹಾವು..!ಕೋಳಿ ಮರಿಯೆಂದು ತಿಳಿದು ವಿಷದ ಬಾಟಲಿಯನ್ನೇ ನುಂಗಿತು..!ಮುಂದೇನಾಯ್ತು?

ತಡರಾತ್ರಿ ಗಾಂಜಾ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು