Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹಾರಾಟದ ಬಳಿಕ ವಿಮಾನದೊಳಗೆ ಬೆತ್ತಲೆಯಾಗಿ ಓಡಾಡಿದ ಮಹಿಳೆ..! ವಿಡಿಯೋ ವೈರಲ್

1.4k
Spread the love

ನ್ಯೂಸ್ ನಾಟೌಟ್ : ವಿಮಾನ ಹಾರಾಟದ ಮಧ್ಯೆ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಈಕೆಯ ಈ ವರ್ತನೆಯಿಂದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ವಿವಸ್ತ್ರಗೊಂಡು ಓಡಾಡುವ ಮೂಲಕ ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಹೂಸ್ಟನ್‌ ನಿಂದ ಫೀನಿಕ್ಸ್ ಗೆ ಹೊರಟಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದಲ್ಲಿ ಓರ್ವ ಮಹಿಳೆ ಸಂಪೂರ್ಣವಾಗಿ ತನ್ನ ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿದ್ದಾಳೆ.

ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದ್ದು, ವಿಮಾನ ಹಾರಾಟದ ಮಧ್ಯೆ ತನ್ನ ಟಾಪ್ ಮತ್ತು ಪ್ಯಾಂಟ್ ತೆಗೆದು ಕಾಕ್‌ಪಿಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಮತ್ತು ಸುಮಾರು 30 ನಿಮಿಷಗಳ ಕಾಲ ಬೆತ್ತಲಾಗಿಯೇ ಸಹ ಪ್ರಯಾಣಿಕರ ಮುಂದೆ ಓಡಾಡಿದ್ದಾಳೆ ಮತ್ತು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.

ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಪೈಲಟ್ ವಿಮಾನವನ್ನು ಮತ್ತೆ ವಿಮಾನ ನಿಲ್ದಾಣದಲ್ಲಿ ತಂದು ಇಳಿಸಿದ್ದಾರೆ. ಇದಾದ ನಂತರ ಮಹಿಳೆಯನ್ನು ಹೂಸ್ಟನ್ ಪೊಲೀಸರಿಗೆ ಒಪ್ಪಿಸಲಾಯಿತು. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾರ್ಚ್ 7ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ.

See also  ಕಸದ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ 2 ಮಹಿಳೆಯರು ಸಾವು..! ಲಾರಿ ಚಾಲಕ ಪೊಲೀಸರ ವಶಕ್ಕೆ
  Ad Widget   Ad Widget   Ad Widget   Ad Widget   Ad Widget   Ad Widget