ನ್ಯೂಸ್ ನಾಟೌಟ್: ಏಪ್ರಿಲ್ 1 ರಿಂದ ಮಾರುತಿ ಸುಜುಕಿ (Maruti Suzuki) ಕಂಪನಿ ಕಾರುಗಳ ಬೆಲೆ ದುಬಾರಿ ಆಗಲಿದೆ ಎಂದು ವರದಿ ತಿಳಿಸಿದೆ.
ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಹೆಚ್ಚುತ್ತಿರುವ ಇನ್ ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಂದಾಗಿ ಏಪ್ರಿಲ್ 2025 ರಿಂದ ತನ್ನ ಕಾರುಗಳ ಬೆಲೆಯನ್ನು ಶೇ. 4 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ.
ಮಾಡೆಲ್ ಅವಲಂಬಿಸಿ ಬೆಲೆ ಏರಿಕೆ ಬದಲಾಗುತ್ತದೆ ಎನ್ನಲಾಗಿದೆ. ಕಂಪನಿಯು ಮಾಡೆಲ್ ವಾರು ಬೆಲೆ ಏರಿಕೆಯನ್ನು ನಿರ್ದಿಷ್ಟಪಡಿಸಿಲ್ಲ. ಮಾರುತಿ ತನ್ನ ಹೊಸ ಕಾರುಗಳನ್ನು ನೆಕ್ಸಾ ಮತ್ತು ಅರೆನಾ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ.
ನೆಕ್ಸಾ ಮಳಿಗೆಗಳು ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್ ಎಲ್ 6 ಮತ್ತು ಇನ್ವಿಕ್ಟೊದಂತಹ ಮಾಡೆಲ್ ಗಳನ್ನು ನೀಡುತ್ತವೆ. ಅರೆನಾ ಮಳಿಗೆಗಳ ಮೂಲಕ ಮಾರಾಟವಾಗುವ ಮಾಡೆಲ್ ಗಳಲ್ಲಿ ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲಿಯೊ, ಈಕೊ, ವ್ಯಾಗನ್ ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಸೇರಿವೆ.
ಹೆಚ್ಚುತ್ತಿರುವ ಇನ್ ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇದೇ ಏಪ್ರಿಲ್ ನಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ. ಬೆಲೆ ಹೆಚ್ಚಳವು 4% ವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಮಾರುತಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಸ್ಟಾರ್ ನಟ ಮಮ್ಮುಟ್ಟಿಗೆ ಕ್ಯಾನ್ಸರ್..? ಈ ಬಗ್ಗೆ ನಟನ ಪಿಆರ್ ಟೀಮ್ ಹೇಳಿದ್ದೇನು..?