ನಮ್ಮ ತುಳುವೇರ್

ಆಫ್ಘಾನಿಸ್ತಾನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕರಾವಳಿ ಕನ್ನಡಿಗರು ಇಂದು ರಾತ್ರಿಯೇ ಮಂಗಳೂರಿಗೆ?

34

ಬೆಂಗಳೂರು: ಆಫ್ಘಾನಿಸ್ತಾನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕರಾವಳಿ ಮೂಲದ ಕನ್ನಡಿಗರು ಇಂದು ರಾತ್ರಿ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ 146 ಮಂದಿ ಕನ್ನಡಿಗರ ಮೊದಲ ಬ್ಯಾಚ್ ಅನ್ನು ಏರ್‌ ಲಿಫ್ಟ್‌ ಮೂಲಕ ದೆಹಲಿಗೆ ಕರೆ ತರಲಾಗಿದೆ. ಅಲ್ಲಿ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದೆ. ಎಲ್ಲರ ವರದಿ ನೆಗೆಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಯಾರೆಲ್ಲ ಕರಾವಳಿಗರು ಇದ್ದಾರೆ?

ದಿನೇಶ್ ರೈ ಬಜ್ಪೆ, ಜಗದೀಶ್ ಪೂಜಾರಿ ಮೂಡಬಿದಿರೆ, ಪ್ರಸಾದ್‌ ಆನಂದ್ ಉಳ್ಳಾಲ, ಶ್ರವಣ್ ಅಂಚನ್ ಬಿಜೈ, ಡೆಸ್ಮೆಂಡ್ ಡೆವಿಡ್ ಡಿಸೋಜಾ ಕಿನ್ನಿಗೋಳಿ ಇದ್ದಾರೆ.