Latest

ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ದರ ಏರಿಕೆ ಶಾಕ್! ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ ಹೆಚ್ಚುವರಿ ಹಾಲಿಗೂ ಶೀಘ್ರದಲ್ಲೇ ಕತ್ತರಿ!!

1.1k
Spread the love

ನ್ಯೂಸ್‌ ನಾಟೌಟ್: ಹಾಲಿನ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದಾಗಿ ಜನ ಸಾಮಾನ್ಯರ ಪಾಡು ಹೇಳತೀರದೆಂಬಂತಾಗಿದೆ. ಅದರ ಮಧ್ಯೆ ಇದೀಗ ಸಾಮಾನ್ಯ ಜನರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಇಷ್ಟು ದಿನ ಪ್ರತಿ ಲೀಟರ್, ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ಬರುತ್ತಿದ್ದ ಹೆಚ್ಚುವರಿ ಹಾಲಿಗೂ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ಹೌದು, ರಾಜ್ಯದ ಜನತೆಗೆ ಸದ್ಯದಲ್ಲೇ ಹಾಲಿನ ಏರಿಕೆ ದರ ಶಾಕ್ ಎದುರಾಗುವ ಬಗ್ಗೆ ಸರ್ಕಾರವೇ ಸುಳಿವು ನೀಡಿದೆ. ಈ ಮಧ್ಯೆ ಕಳೆದ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಕೂಡ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ (KMF) ಚಿಂತನೆ ಮಾಡಿದ್ದು, ಇದರ ಜೊತೆಗೆ ಸದ್ಯ ಹೆಚ್ಚುವರಿ ಹಾಲಿಗೆ (Extra Milk) ನೀಡುತ್ತಿರುವ ಶೀಘ್ರದಲ್ಲೇ ಕತ್ತರಿ ಹಾಕುವ ಸಾಧ್ಯತೆ ಇದೆಯೆಂದು ತಿಳಿದು ಬಂದಿದೆ.

ಕಳೆದ ಐದಾರು ತಿಂಗಳಿನಿಂದ ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲೂ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನೂ ಸದ್ಯದಲ್ಲೇ ಕಡಿತ ಮಾಡುವ ನಿಟ್ಟಿನಲ್ಲಿ ಕೆಎಂಎಫ್ (KMF) ಚಿಂತನೆ ಮಾಡಿದ್ದು, ಇದರ ಜೊತೆಗೆ ಸದ್ಯ ಹೆಚ್ಚುವರಿ ಹಾಲಿಗೆ (Extra Milk) ನೀಡುತ್ತಿರುವ ಹಣಕ್ಕೆ ಹೆಚ್ಚುವರಿ ದರ ಏರಿಕೆ ಮಾಡಿ, ಹಾಲನ್ನು ಕಡಿತಗೊಳಿಸುವ ಬಗ್ಗೆ ಕೆಎಂಎಫ್ ಚಿಂತನೆಗೆ ಮುಂದಾಗಿದೆ.ಐದಾರು ತಿಂಗಳ ಹಿಂದೆ ಪ್ರತಿನಿತ್ಯ ಒಂದು ಕೋಟಿ ಸಮೀಪ ಹಾಲು ಉತ್ಪಾದನೆಯಾಗುತ್ತಿದ್ದ ಕಾರಣ ಹಾಲನ್ನ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್‌ಗಳಲ್ಲಿ ಕ್ರಮವಾಗಿ 50 ಎಂಎಲ್, ಮತ್ತು 100 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ, ಹೆಚ್ಚುವರಿಯಾಗಿ ದರ ಪರಿಷ್ಕರಣೆ ಮಾಡಿದ್ದರು. ಆದರೆ ಸದ್ಯ ಬೇಸಿಗೆ ಕಾರಣ ಹಿಂದೆ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಉತ್ಪಾದನೆ ಕಷ್ಟವಾಗಲಿದ್ದು, ಸುಮಾರು 10 ರಿಂದ 15%ನಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ.

ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನ ಕಡಿತ ಮಾಡುವ ಸಾಧ್ಯತೆ ಇದೆ. ಆದರೆ ಹಾಲು ಕಡಿತ ಆದರೂ ಹೆಚ್ಚುವರಿ ಹಾಲಿಗೆ ಪಡೆಯುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.ಸದ್ಯ ದರ ಏರಿಕೆಗೆ ಚಿಂತನೆ ಮಾಡಿರುವ ಸರ್ಕಾರ, ಹೆಚ್ಚುವರಿ ಹಾಲು ಕಡಿತವಾದರೂ ಅದೇ ದರಕ್ಕೆ ಮತ್ತೆ ಹೊಸ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಭೆ ಮಾಡಿ ತೀರ್ಮಾನ ಮಾಡಲು ಕೆಎಂಎಫ್ ನಿರ್ಧಾರ ಮಾಡಿದ್ದು, ದರ ಏರಿಕೆಗೂ ಮುನ್ನವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

See also  ಸಂಪಾಜೆಯ ಬಡ ಕುಟುಂಬದ ಮನೆ ಯಜಮಾನನಿಗೆ ಮೆದುಳಿನ ರಕ್ತಸ್ರಾವ..! ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲು, ಚಿಕಿತ್ಸೆಗೆ ಸಿಗಬಹುದೇ ನಿಮ್ಮ ಸಹಾಯದ ಹಸ್ತ..?
  Ad Widget   Ad Widget   Ad Widget   Ad Widget   Ad Widget   Ad Widget