ಕರಾವಳಿ

ಸುಳ್ಯ: ಮುಸ್ಲಿಂ ಧರ್ಮದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾದ ಆಸಿಯಾ ಕಟ್ಟೆಕಾರ್

859

ಸುಳ್ಯ :ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸುಳ್ಯ ಕಟ್ಟೆಕಾರ್ ಕುಟುಂಬದ  ಖಲೀಲ್ ಎಂಬವನನ್ನು ಮದುವೆಯಾಗಿ ಬಳಿಕ ಡೈವೋರ್ಸ್ ನಲ್ಲಿ ಅಂತ್ಯವಾದ ಆಸಿಯಾ ಬದುಕಿನ ಮತ್ತೊಂದು ಇನಿಂಗ್ಸ್ ಆರಂಭವಾಗಿದೆ. ಇದೀಗ ಕೇರಳ ಮೂಲದ ಉದ್ಯಮಿ ಇಮ್ರಾನ್ ಎಂಬವರನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಹಿಂದೂ ಕುಟುಂಬದಲ್ಲಿ ಜನಿಸಿ ಶಾಂತಿ ಹೆಸರಿನಲ್ಲಿ ಬೆಳೆದಿದ್ದ ಹುಡುಗಿ ಬಳಿಕ ಆಸಿಯಾ ಆದಳು. ಕಟ್ಟೆಕಾರ್ ಕುಟುಂಬದ ಇಬ್ರಾಹಿಂ ಖಲೀಲ್‌ ಕಟ್ಟೆಕಾರ್ ನನ್ನು ಮದುವೆಯಾದಳು. ಆದರೆ ಬರುತ್ತಾ ಇವರ ಜೀವನದಲ್ಲಿ ವಿರಸ ಹೆಚ್ಚಾಯಿತು. ಆಕೆಯನ್ನು ಬಿಟ್ಟು ಆತ ತಲೆಮರೆಸಿಕೊಂಡ. ಆಕೆ ನ್ಯಾಯಕ್ಕಾಗಿ ಕಟ್ಟೆಕಾರ್ ಅಂಗಡಿ ಎದುರು ಹೋರಾಟ ನಡೆಸಿದಳು. ಎಷ್ಟು ಪ್ರಯತ್ನಿಸಿದರೂ ಆಸಿಯಾಗೆ ಇಬ್ರಾಹಿಂ ಖಲೀಲ್ ಜತೆಗಿನ ಜೀವನ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಜೋಡಿ ಪರಸ್ಪರ ಸಮ್ಮತಿಯಿಂದ ಡೈವೋರ್ಸ್ ಗೆ ಪಡೆದುಕೊಂಡಿತ್ತು. ಇದೀಗ ಆಸಿಯಾ ಮತ್ತೊಂದು ಮದುವೆಯಾಗಿ ಮುಸ್ಲಿಂ ಧರ್ಮದಲ್ಲಿಯೇ ತನ್ನ ಜೀವನ ಮುಂದುವರಿಸಿಕೊಂಡು ಹೋಗಿದ್ದಾರೆ.

See also  ಉಪ್ಪಿನಂಗಡಿ: ಚಲಿಸುತ್ತಿದ್ದ KSRTC ಐರಾವತ ಬಸ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ..! ಎಸಿ(Air Conditioner)ಯಲ್ಲಿ ಕಾಣಿಸಿಕೊಂಡ ಬೆಂಕಿ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget