Latest

ಮೈಸೂರು: ನೆರೆ ಮನೆಯ ಸ್ನೇಹಿತೆಯನ್ನೇ ಕೊಂದ ಮಹಿಳೆ!!ಪೊಲೀಸ್ ಇಲಾಖೆ ನಿವೃತ್ತ ನೌಕರ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ!

763
Spread the love

ಮೈಸೂರು:ಕೆಲವೊಮ್ಮೆ ಮಹಿಳೆಯನ್ನ ಕಂಡ್ರೆ ಮಹಿಳೆಗೆನೇ ಆಗಿಬರೋದಿಲ್ಲ. ಒಬ್ಳು ಮಹಿಳೆ ಸೀರೆ ತಕೊಂಡ್ರೆ ಆಕೆ ಸ್ನೇಹಿತೆ ಆಗಿದ್ರೂ ಒಳಗೊಳಗೆ ಹೊಟ್ಟೆ ಕಿಚ್ಚು ಪಡುವಂಥವರು ಇರ್ತಾರೆ.ಇನ್ನು ಕೆಲವರಿಗೆ ಎಷ್ಟಿದ್ದರೂ ಸಾಲದು ಎನ್ನುವ ಭಾವನೆ. ತೃಪ್ತಿನೇ ಇರಲ್ಲ. ಅದಕ್ಕಾಗಿ ಏನೂ ಮಾಡೋದಕ್ಕೂ ರೆಡಿಯಾಗಿರ್ತಾರೆ. ಇಂತಹ ಡೇಂಜರ್ ಮಹಿಳೆಯರೂ ನಮ್ಮ ಸಮಾಜದಲ್ಲಿದ್ದಾರೆ. ಮಾತೃ ಹೃದಯ ಅನ್ನುವ ಪದಕ್ಕೂ ಇಂತಹ ಹೆಂಗಸರು ತದ್ವಿರುದ್ಧ.ತಾನು ತನ್ನದು ಎನ್ನುವ ಸ್ವಾರ್ಥವೂ ಇರಬಹುದೇನೋ.. ಹೀಗೆ ಮೈಸೂರಿನಲ್ಲಿ ಇಂತಹ ಒಂದು ಘಟನೆ ಬಗ್ಗೆ ವರದಿಯಾಗಿದೆ. ಹೇಳೋದಕ್ಕೆ ಆಕೆ ಸ್ನೇಹಿತೆ ಆಗಿದ್ರೂ ಚಿನ್ನದ ಸರಕ್ಕೋಸ್ಕರ ಕೊಂದೇ ಬಿಡೋದಾ.. ಅಬ್ಬಬ್ಬಾ ಎಂತಹ ಕಠೋರ ಮನಸ್ಸು ಇರಬೇಕು.

ಮೈಸೂರಿನ ಕೆಸಿ.ಬಡಾವಣೆಯಲ್ಲಿ ಮಾ.5 ರಂದು ನಡೆದ ಘಟನೆ‌ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು. ಅದೇ ಬಡವಾಣೆ ನಿವಾಸಿ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿ.ಮಾ . ೫ ರಂದು ಮನೆಗೆ ಬಂದ ಸುಲೋಚನಾರನ್ನು ಉಸಿರುಗಟ್ಟಿಸಿ ಶಕುಂತಲಾ ಕೊಲೆ ಮಾಡಿ ಮೃತದೇಹದ ಮೇಲಿದ್ದ ಚಿನ್ನದ ಸರ ಕಳಚಿ ಕೊಂಡಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದುಹೋದರೆಂದು ಸುತ್ತಲ ಮನೆಯವರನ್ನು ಶಕುಂತಲಾ ನಂಬಿಸಿದ್ದಳು. ನಂತರ ಅನುಮಾನದೊಂದಿಗೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇವರಿಬ್ಬರು ಒಂದೇ ಬೀದಿಯ ನಿವಾಸಿಗಳು.ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿತ್ತು. ಸಾಲದ ಸುಳಿಯಲ್ಲಿ ಸಿಲುಕಿತ್ತು. ತೀರಿಸಲು ಇಂತಹ ಕೃತ್ಯವೆಸಗಿದ್ದಾಳೆ. ಸುಲೋಚನಾ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಭಾರತದಲ್ಲಿ ಟೆಸ್ಲಾ ಕಂಪನಿಯಿಂದ ಉದ್ಯೋಗ ನೇಮಕಾತಿ..! ದೇಶೀಯ ಮಾರುಕಟ್ಟೆಗೆ ಎಲನ್ ಮಸ್ಕ್ ಕಂಪನಿ..?
  Ad Widget   Ad Widget   Ad Widget   Ad Widget