ನ್ಯೂಸ್ ನಾಟೌಟ್: ಇತ್ತೀಚೆಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಲ್ಲುಗುಂಡಿಯ ವಿದ್ಯಾರ್ಥಿನಿ ರಶ್ಮಿ ಎನ್.ಎ ಅವರು ಇತಿಹಾಸ ವಿಭಾಗದಲ್ಲಿ 3ನೇ ಶ್ರೇಯಾಂಕ (Rank) ದಲ್ಲಿ ಪಾಸ್ ಆಗುವುದರೊಂದಿಗೆ ಪ್ರಚಂಡ ಸಾಧನೆ ಮೆರೆದಿದ್ದಾರೆ.
ರಶ್ಮಿ ಅವರು ಸಂಪಾಜೆ ಗ್ರಾಮದ ಕಲ್ಲುಗುಂಡಿಯ ದಂಡೆಕಜೆಯ ನೆಕ್ಕಿಲ ಎಲ್ಯಣ್ಣ ಗೌಡ ಹಾಗೂ ನಳಿನಿಯವರ ಪುತ್ರಿಯಾಗಿದ್ದಾರೆ. ರಶ್ಮಿ ಅವರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಹಂಪನಕಟ್ಟೆ ಇಲ್ಲಿ ಬಿಎಡ್ ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದರು. ಸದ್ಯ ಹಾಸನದಲ್ಲಿ ಸ್ಕಾಲರ್ಸ್ ಅಂತಾರಾಷ್ಟ್ರೀಯ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಶ್ಮಿ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದು ವಿಶೇಷ. ತಮ್ಮ ಬಾಲ್ಯದ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯಲ್ಲಿ ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದರೂ ಉತ್ತಮ ಶ್ರೇಯಾಂಕವನ್ನು ಪಡೆಯಬಹುದು ಎನ್ನುವುದನ್ನು ರಶ್ಮಿ ನಿರೂಪಿಸಿ ತೋರಿಸಿದ್ದಾರೆ.