ಕರಾವಳಿಬೆಂಗಳೂರು

ಹೆತ್ತ ಮಗುವನ್ನೇ ದಿನವಿಡೀ ಮನೆಯೊಳಗೆ ಕೂಡಿ ಹಾಕುತ್ತಿದ್ದ ತಾಯಿ..! ಪ್ರಿಯಕರನೊಂದಿಗೆ ಸೇರಿ 3 ವರ್ಷದ ಕಂದಮ್ಮನಿಗೆ ಮನಬಂದಂತೆ ಹಲ್ಲೆ..!ಏನಿದು ಅಮಾನವೀಯ ಘಟನೆ?

179

ನ್ಯೂಸ್‌ ನಾಟೌಟ್‌:ಅಮ್ಮನಿಗೆ ತಾನು ಹೆತ್ತ ಮಗುವೇ ಪ್ರಪಂಚ, ಮಗುವಿಗೂ ಅಷ್ಟೇ ಅಮ್ಮ ಅಂದ್ರೆ ಬಹಳ ಅಚ್ಚುಮೆಚ್ಚು.ಹೀಗಿರುವಾಗ ಇಲ್ಲೊಬ್ಬಳು ತಾನು ಹೆತ್ತ ಮಗುವಿಗೆ ಏನು ಮಾಡಿದ್ದಾಳೆ ನೋಡಿ… ಈ ಘಟನೆ ನೋಡಿದಾಗ ಎಂಥ ಕ್ರೂರಿ ತಾಯಿ ಅನ್ನಿಸದಿರದು.

ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದಲ್ಲದೇ ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದಾಳೆ. ಗಂಡನಿಂದ ವಿಚ್ಛೇದನೆ ಪಡೆದುಕೊಂಡಿರುವ ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗುವಿನ ಮೈ ತುಂಬ ಗಾಯಗಳಾಗಿವೆ. ಈ ಅಮಾನುಷ ಕೃತ್ಯ ಬೆಂಗಳೂರಿನ(Bengaluru) ವೀರಭದ್ರ ನಗರದಲ್ಲಿ ನಡೆದಿದೆ.ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದ ಘಟನೆ ಎಂಥವರ ಮನಸ್ಸನ್ನು ಕರಗುವಂತೆ ಮಾಡುತ್ತಿದೆ.

ಮನೆಗೆ ಬಂದ ಅಂಕಲ್‌ವೊಬ್ಬರ್‌ ಕುಕ್ಕರ್‌ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸ್ಥಳೀಯರೊಬ್ಬರ ಬಳಿ ಹೇಳಿಕೊಂಡಿದೆ.ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗೆಯದೆ ಕೂಡಿಹಾಕುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ.

ಇದೀಗ ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ. ಇನ್ನು ಮೈತುಂಬ ಗಾಯಗೊಂಡಿದ್ದ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸಿಡಬ್ಲ್ಯೂಸಿಗೆ(CWC)ಗೆ ದೂರು ಕೊಟ್ಟರೂ ಕ್ರಮಕೈಗೊಂಡಿಲ್ಲ. ಮತ್ತೊಂದು ಕಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.ಮಗುವಿಗೆ ಹೊಡೆದಿರುವುದನ್ನು ಸ್ವತಃ ತಾಯಿ ಸ್ಟ್ಯಾರೀನ್ ಒಪ್ಪಿಕೊಂಡಿದ್ದಾಳೆ. ನಾನು ಮಗುವಿಗೆ ಹೊಡದಿದ್ದೇನೆ. ಆದ್ರೆ ಮಗು ಬುದ್ಧಿಕಲಿಬೇಕು ಎಂದು ಮಾಡಿದ್ದೀನಿ. ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಈ ರೀತಿ ಮಾಡಿದ್ದೀನಿ. ಮಗುವೇ ಸುಳ್ಳು ಹೇಳುತ್ತೆ. ನನಗೆ ಕೆಲಸ ಇರಲಿಲ್ಲ. ನನ್ನ ಗಂಡನ ಜೊತೆ ವಿಚ್ಛೇದನವಾಗಿದ್ದು, ಮನೆಯಲ್ಲಿ ನಾನು ಒಬ್ಬರೇ ಇರುವುದು. ಹೀಗಾಗಿ ಮಗುವನ್ನ ಕೂಡಿ ಹಾಕುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾಳೆ.

See also  ಮಡಿಕೇರಿ: ದಯಾ ಮರಣ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದ ಮಂಗಳಮುಖಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget