Latest

ಮಡಿಕೇರಿ:ಆಟವಾಡೋ ವೇಳೆ ತನ್ನ ಸಹಪಾಠಿಗಳೊಂದಿಗೆ ಕೆರೆಗೆ ಹಾರಿದ ಬಾಲಕಿ! ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿ ದುರಂತ ಸಾವು!

734
Spread the love

ನ್ಯೂಸ್‌ ನಾಟೌಟ್:ತನ್ನ ಸಹಪಾಠಿಗಳೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಟವಾಡಲೆಂದು ಕೆರೆಗೆ ಹಾರಿದ ಸಂದರ್ಭ ದುರಂತ ಅಂತ್ಯ ಕಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಈ ದಾರುಣ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ (Ponnampete) ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ಕೆರೆಗೆ ಹಾರಿದ ಸಂದರ್ಭ ಬಾಲಕಿಗೆ ಮೇಲಕ್ಕೆ ಬರಲಾಗದೇ ಕೆರೆಯಲ್ಲಿಯೇ ಉಸಿರು ನಿಂತು ಹೋಗಿದೆ ಎಂದು ವರದಿಯಾಗಿದೆ.

ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತೋಟದ ಕಾರ್ಮಿಕರಾಗಿರುವ ಭವಾನಿ ಎಂಬುವವರ 9 ವರ್ಷದ ಪುತ್ರಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ ಜತೆ ಇನ್ನೂ ಇಬ್ಬರು ಮಕ್ಕಳು ಕೆರೆಗೆ ಹಾರಿದ್ದರು. ಆದರೆ ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿ ಕಿರುಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದರು. ಈ ಬಾಲಕಿಯನ್ನು ಕೆಸರಿಂದ ಹೊರಕ್ಕೆ ತರುವ ಪ್ರಯತ್ನ ವಿಫಲವಾದ್ದರಿಂದ ಆಕೆ ಅಸುನೀಗಿದ್ದಾಳೆ ಎನ್ನಲಾಗಿದೆ.ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಆಗಿರುವ ಮೃತ ಬಾಲಕಿ ನಾಳೆ ವಾರ್ಷಿಕ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಬಾಲಕಿಯು ವಿಧಿಯೊಡ್ಡಿದ ಪರೀಕ್ಷೆಗೆ ಬಲಿಯಾಗಿರುವುದು ಖೇದಕರ ಸಂಗತಿ. ಗೋಣಿಕೊಪ್ಪ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

See also  ಮಾರ್ಚ್ 7 ರಂದು ಕರ್ನಾಟಕ ಬಜೆಟ್ ಮಂಡನೆ, ಸಿಎಂ ಸಿದ್ದರಾಮಯ್ಯ ಘೋಷಣೆ
  Ad Widget   Ad Widget   Ad Widget   Ad Widget   Ad Widget   Ad Widget