Latest

ಒಂದೂವರೆ ತಿಂಗಳ ಶಿಶುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿದ ವೈದ್ಯ!!3000 ರೂ. ಬೆಲೆಯ ಲಸಿಕೆ ಹಾಕಿ ನಿರ್ಲಕ್ಷ್ಯ ತೋರಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಮಗುವಿನ ಪೋಷಕರು

358
Spread the love

ನ್ಯೂಸ್‌ ನಾಟೌಟ್:ನವಜಾತ ಶಿಶುಗಳ ಬಗ್ಗೆ ಎಷ್ಟು ಕೇರ್‌ ತಕೊಂಡರೂ ಸಾಲೋದಿಲ್ಲ.ಒಂದು ಸಣ್ಣ ಎಡವಟ್ಟುಗಳಾದರೂ ಮಗುವಿನ ಮೇಲೆ ಅಡ್ಡ ಪರಿಣಾಮಗಳಾಗೋ ಸಾಧ್ಯತೆಗಳೇ ಹೆಚ್ಚು. ಇದೀಗ ಒಂದೂವರೆ ತಿಂಗಳ ಶಿಶುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿ, ವೈದ್ಯನೋರ್ವ ನಿರ್ಲಕ್ಷ್ಯ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ಯಾದಗಿರಿ (Yadagiri) ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ.

ತುಮಕೂರಿನ (Tumakuru) ಕುಣಿಗಲ್ (Kunigal) ಮೂಲದ ತ್ಯಾಗರಾಜ ಮತ್ತು ದೇವಿಕಾ ದಂಪತಿಯ ಮಗುವಿಗೆ ಲಸಿಕೆ ಹಾಕಿದ್ದಾರೆ. ಮಗು ಜನಿಸಿದ 45 ದಿನಗಳ ನಂತರ ಬಿಸಿಜಿ/ಹೆಕ್ಸಾಕ್ಸಿಮ್ ಲಸಿಕೆ ಹಾಕಿಸಬೇಕಾಗಿತ್ತು. ಈ ಹಿನ್ನೆಲೆ ತಾಯಿ ದೇವಿಕಾ ಯಾದಗಿರಿಯ ಖಾಸಗಿ ಆಸ್ಪತ್ರೆಗೆ ಲಸಿಕೆ ಹಾಕಿಸಲು ಹೋಗಿದ್ದರು. ಈ ವೇಳೆ ವೈದ್ಯರು ಅದೇ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್‌ನಲ್ಲಿ ಖರೀದಿಸಿದ್ದ 3 ಸಾವಿರ ರೂ. ಬೆಲೆಯ ಲಸಿಕೆಯನ್ನು ಹಾಕಿದ್ದು ನಿರ್ಲಕ್ಷ್ಯ ವಹಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡು ಮನೆಗೆ ಬಂದ ಪತ್ನಿ, ತನ್ನ ಗಂಡನಿಗೆ ಲಸಿಕೆ ಕವರ್ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಲಸಿಕೆಯ ಕವರ್ ಮೇಲೆ ಎಕ್ಸ್‌ಪೈರಿ ದಿನಾಂಕ ನವೆಂಬರ್ 2022  ಎಂದು ಪ್ರಿಂಟ್ ಆಗಿದೆ. 2 ವರ್ಷ ಅವಧಿ ಮುಗಿದಿರುವ ಲಸಿಕೆ ಹಾಕಿದ್ದನ್ನು ಕಂಡ ಪೋಷಕರು ಆತಂಕಗೊಂಡಿದ್ದಾರೆ.

ಕುಣಿಗಲ್‌ನಿಂದ ಯಾದಗಿರಿಗೆ ದಾಖಲಾತಿಯೊಂದಿಗೆ ಬಂದ ಮಗುವಿನ ತಂದೆ ಡಿಹೆಚ್ ಓ ಬಳಿ ಹೋಗಿ ನಡೆದಿರುವ ಘಟನೆ ಕುರಿತು ಮಾಹಿತಿ ನೀಡಿ, ನನ್ನ ಮಗುವಿನ ಪ್ರಾಣಕ್ಕೆ ಅಪಾಯವಾಗುವ ಲಸಿಕೆ ಹಾಕಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರ ಮುಗ್ಧತೆ ದುರ್ಬಳಕೆ ಮಾಡಿಕೊಂಡು ಮೆಡಿಕಲ್ ಮಾಫಿಯಾ ಮಾಡ್ತಿದ್ದಾರೆಂದು ಆರೋಪಿಸಿ, ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

See also  ವಿಮಾನ ನಿಲ್ದಾಣದ ಶೌಚಾಲಯದ ನೀರಿನಲ್ಲಿ ಮುಳುಗಿಸಿ ಸಾಕುನಾಯಿಯ ಹತ್ಯೆ..! ಮಹಿಳೆ ಅರೆಸ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget