21.6 C
Sullia
Sunday, March 8, 2026

ಪುತ್ತೂರು : ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿ ಕಾಲಿಗೆ ಗುಂಡು!ಏನಿದು ಘಟನೆ?

ನ್ಯೂಸ್ ನಾಟೌಟ್ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ
ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಪುತ್ತೂರಿನಿಂದ ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆರೋಪಿ ಅಬ್ದುಲ್ಲಾ (40) ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.ಈತ ಈಚರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸುತ್ತಿದ್ದ, ಅಬ್ದುಲ್ಲಾ ಚಾಲಕನಾಗಿದ್ದ, ಇನ್ನೊಬ್ಬ ಆರೋಪಿಯೂ ವಾಹನದಲ್ಲಿದ್ದ.

ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ನಿಲ್ಲಿಸದೆ
ಪರಾರಿಯಾದಾಗ ಪೊಲೀಸರು ಸುಮಾರು 10 ಕಿಮೀ ಬೆನ್ನಟ್ಟಿದ್ದಾರೆ.
ಆರೋಪಿ ಪೊಲೀಸ್ ಜೀಪಿಗೆ ಹಿಂಬದಿಯಿಂದ ವಾಹನ ಢಿಕ್ಕಿ
ಹೊಡೆದಿದ್ದು, ಈ ವೇಳೆ ಪಿಎಸ್‌ಐ ಎರಡು ಸುತ್ತು ಗುಂಡುಗಳನ್ನು ಫೈರ್
ಮಾಡಿದ್ದಾರೆ. ಒಂದು ವಾಹನದ ಮೇಲೆ ಹಾಗೂ ಮತ್ತೊಂದು
ಆರೋಪಿಯ ಕಾಲಿಗೆ ಬಿದ್ದಿದೆ.


ಈ ವೇಳೆ ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿ ಯಾಗಿದ್ದಾನೆ.
ಆರೋಪಿ ಅಬ್ದುಲ್ಲ ಮೂಲತ ಕೇರಳದ ಕಾಸರಗೋಡಿನವನು ಎಂದು
ತಿಳಿದು ಬಂದಿದೆ.ಆರೋಪಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಈತನ ಮೇಲೆ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles