ನ್ಯೂಸ್ ನಾಟೌಟ್ : ಮಗು ಜನಿಸಿ ವರ್ಷ ಕಳೆದರೂ ದೀಪಿಕಾ ಪಡುಕೋಣೆ ಅವರು ಮಗಳ ಫೋಟೋ ತೋರಿಸಿಯೇ ಇರಲಿಲ್ಲ. ಇದೀಗ ಮಗಳು ದುವಾ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ದುವಾ ಸಖತ್ ಕ್ಯೂಟ್ ಆಗಿದ್ದಾಳೆ. ಅವಳ ಪುಟಾಣಿ ಜುಟ್ಟ ಕೂಡ ಗಮನ ಸೆಳೆಯುವಂತಿದೆ. ಅವಳು ನಕ್ಕಾಗ ಅದೆಷ್ಟು ಸುಂದರವಾಗಿ ಕಾಣುತ್ತಾಳೆ ಎಂದು ಹೇಳಲೇ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ. ದೀಪಿಕಾ ಹಾಗೂ ದುವಾ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ.
ಫೋಟೋ ನೋಡಿದ ಅನೇಕರು ಇದನ್ನು ಎಐ ಜನರೇಟೆಡ್ ಫೋಟೋ ಎಂದು ಭಾವಿಸಿದರು. ಆದರೆ, ಹಾಗಿಲ್ಲ. ಇದು ಅಸಲಿ ಫೋಟೋ ಎಂಬುದು ಆ ಬಳಿಕ ಗೊತ್ತಾಗಿದೆ. ಕೆಲವರು ದುವಾ ದೀಪಿಕಾ ತರ ಇದ್ದಾಳೆ ಎಂದರೆ ಇನ್ನೂ ಕೆಲವರು ರಣವೀರ್ ಸಿಂಗ್ ರೀತಿ ಇದ್ದಾರೆ ಎನ್ನುತ್ತಿದ್ದಾರೆ.













