21.6 C
Sullia
Sunday, March 8, 2026

ಸುಳ್ಯ:ತೀರಾ ಅಪರೂಪ ಮತ್ತು ವಿರಳ ಕಾಯಿಲೆಯಿಂದ ಬಳಲುತ್ತಿದ್ದ ಚಾಂದಿನಿ ಕೊನೆಯುಸಿರು,ಏನಿದು ಅಪರೂಪದ ಕಾಯಿಲೆ? ಲಕ್ಷಣಗಳೇನು?

ನ್ಯೂಸ್ ನಾಟೌಟ್ :  ನಾಳೆಯ ನಿರೀಕ್ಷೆಯಲ್ಲಿ ಆತ್ಮವಿಶ್ವಾಸದೊಂದಿಗೆ ಬದುಕು ನಡೆಸುತ್ತಿದ್ದ, ವಿರಳ ಹಾಗೂ ತೀರ ಅಪರೂಪದ ಖಾಯಿಲೆ Hyper IGE Mediated Mast cell activation syndrome ನಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗಾಂಧಿನಗರ ನಿವಾಸಿ ಚಾಂದಿನಿ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇವರಿಗಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಕೂಡ ಬಹಳ ಸಮಯ ತೆಗೆದುಕೊಂಡಿತ್ತು. ಅಂತಿಮವಾಗಿ ಇವರಿಗೆ ಇದ್ದಿದ್ದು ಬಹಳ ಅಪರೂಪದ ಕಾಯಿಲೆ ಎಂದು ಗೊತ್ತಾಗಿ, ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು.

ಚಾಂದಿನಿಯವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಚಾಂದಿನಿ ಅವರ ಆರೋಗ್ಯ ತೀರಾ ಹದಗೆಡುತ್ತಾ ಹೋಯಿತು. ಹೀಗಾಗಿ ಸುಳ್ಯ, ಮಂಗಳೂರು ಸೇರಿದಂತೆ ಹಲವೆಡೆ ಚಿಕಿತ್ಸೆ ಪಡೆದಿದ್ರೂ ಕೂಡ ಗುಣಮುಖರಾಗಿರಲಿಲ್ಲ. ಚಾಂದಿನಿ ಅವರು ಬಳಲುತ್ತಿದ್ದ Hyper IGE Mediated Mast cell activation syndromeಗೆ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದ್ದ ಕಾರಣ, ಹೈದರಾಬಾದ್​ ನ AIG ಆಸ್ಪತ್ರೆಗೆ ಚಾಂದಿನಿ ಅವರನ್ನು ದಾಖಲಿಸಲಾಗಿತ್ತು. ಖಾಯಿಲೆಯನ್ನೂ ಅದೇ ಆಸ್ಪತ್ರೆ ಪತ್ತೆ ಮಾಡಿತ್ತು.ಲಕ್ಷ ಲಕ್ಷ ವ್ಯಯ ಮಾಡಿದರೂ ಚಾಂದಿನಿ ಆರೋಗ್ಯ ಸುಧಾರಿಸಲಿಲ್ಲ.ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ನಿನ್ನೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಅಪರೂಪದ ಕಾಯಿಲೆ

ಹೈಪರ್-IgE ಸಿಂಡ್ರೋಮ್‌ ನಿಂದ ಬಳಲುತ್ತಿರುವವರಲ್ಲಿ ಚರ್ಮದ ಸಮಸ್ಯೆ ಸೇರಿ ಜೀರ್ಣಾಂಗ, ಉಸಿರಾಟದ ತೊಂದರೆ ಮತ್ತು ನರ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚರ್ಮ ಕೆಂಪಾಗುವುದು, ಉಬ್ಬಸ, ಮಲಬದ್ಧತೆ, ಹೊಟ್ಟೆ ನೋವು, ಬ್ರೇನ್​ ಫಾಗ್​, ಹಲ್ಲಿನ ಸಮಸ್ಯೆಗಳು ಸೇರಿ ಹತ್ತು ಹಲವು ಲಕ್ಷಣಗಳು ಕಂಡುಬರುತ್ತವೆ.

Related Articles

LEAVE A REPLY

Please enter your comment!
Please enter your name here

Latest Articles