27.7 C
Sullia
Sunday, March 8, 2026

8 ದಿನ ಪ್ರೇಯಸಿ ಜೊತೆಯಿದ್ದ ಪುತ್ತೂರು ಯುವಕ ಬೆಂಗಳೂರಿನ ಲಾಡ್ಜ್‌ನಲ್ಲಿ ಸಾವು, ಆಗಿದ್ದೇನು?

ನ್ಯೂಸ್ ನಾಟೌಟ್ : 8 ದಿನ ಪ್ರೇಯಸಿ ಜೊತೆಗಿದ್ದು ಬಳಿಕ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಲಾಡ್ಜ್‌ವೊಂದರಲ್ಲಿ ನಡೆದಿದೆ.ಮೃತ ಯುವಕನನ್ನು ಪುತ್ತೂರು ಮೂಲದ ತಕ್ಷಿತ್ (20) ಎಂದು ಗುರುತಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ ಬೆಂಗಳೂರಿಗೆ ಬಂದಿದ್ದ. ತಕ್ಷಿತ್ ಆನ್‌ಲೈನ್ ಮೂಲಕ ಮಡಿವಾಳದಲ್ಲಿರುವ ಲಾಡ್ಜ್‌ವೊಂದರಲ್ಲಿ ರೂಂ ಬುಕ್ ಮಾಡಿದ್ದ. ಎಂಟು ದಿನ ಲಾಡ್ಜ್‌ನಲ್ಲಿ ಪ್ರೇಯಸಿಯೊಂದಿಗೆ ಇದ್ದ. ಗುರುವಾರ ಯುವತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಕೆ ವಿರಾಜಪೇಟೆಗೆ ಹೋಗಿದ್ದಳು. ಹುಡುಗಿ ಹೋದ ಮರುದಿನವೇ ಯುವಕ ಮೃತಪಟ್ಟಿದ್ದಾನೆ.

ಸದ್ಯ ತಕ್ಷಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯುವಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

8 ದಿನಗಳಿಂದ ಜತೆಗಿದ್ದ ಜೋಡಿ:
ತಕ್ಷಿತ್ ಮಂಗಳೂರು ಪಣಂಬೂರಿನ ಕಾಲೇಜೊಂದರಲ್ಲಿ ಬಿಬಿಎ
ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನಲ್ಲಿ ವೀರಾಜಪೇಟೆಯ
ವಿದ್ಯಾರ್ಥಿನಿಯೋರ್ವಳೂ ಇದ್ದಳು. ಆದರೆ ಬ್ಯಾಕ್‌ಲಾಗ್ ಕಾರಣದಿಂದ
ಇಬ್ಬರೂ ಕಾಲೇಜು ಬಿಟ್ಟಿದ್ದರು ಎನ್ನಲಾಗಿದೆ. ತಕ್ಷಿತ್ ತನ್ನ ಮನೆಯಲ್ಲಿ
ಮೈಸೂರಿಗೆ ಓದಲು ಹೋಗುವುದಾಗಿ ತಿಳಿಸಿ ಬೆಂಗಳೂರಿಗೆ
ಬಂದಿದ್ದರು. ಅ. 9ರಿಂದ ಬೆಂಗಳೂರಿನಲ್ಲಿ ಸಹಪಾಠಿ ವಿದ್ಯಾರ್ಥಿನಿ ಜತೆ
ಗ್ರಾಂಡ್ ಚಾಯ್ಸ್ ವಸತಿಗೃಹದಲ್ಲಿ ಕೊಠಡಿ ಪಡೆದು ವಾಸವಾಗಿದ್ದರು
ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎಂಟು ದಿನಗಳಿಂದ ಇಬ್ಬರೂ ಕೊಠಡಿಯಲ್ಲಿ
ಉಳಿದುಕೊಂಡಿದ್ದರು. ಊಟ, ತಿಂಡಿಯನ್ನು ಆನ್‌ಲೈನ್‌ನಲ್ಲಿ
ತರಿಸಿಕೊಳ್ಳುತ್ತಿದ್ದರು. ಘಟನೆ ನಡೆದ ದಿನವೂ ತರಿಸಿಕೊಂಡಿದ್ದರು. ಈ
ಊಟ ಮಾಡಿದ ಅನಂತರ ಇಬ್ಬರಿಗೂ ಫುಡ್ ಪಾಯ್ಸನ್ ಆಗಿರುವ
ಲಕ್ಷಣಗಳು ಕಂಡು ಬಂದಿದ್ದವು ಎನ್ನಲಾಗಿದೆ. ಅನಂತರ ಯುವತಿ
ವಸತಿಗೃಹವನ್ನು ತೊರೆದಿದ್ದಳು. ತಕ್ಷಿತ್ ಕೊಠಡಿಯಿಂದ ಹೊರಗೆ
ಬರದಿದ್ದ ಕಾರಣ ವಸತಿಗೃಹದ ಸಿಬಂದಿ ಶುಕ್ರವಾರ ಸಂಜೆ
ಅನುಮಾನದಿಂದ ಮಾಸ್ಟರ್ ಕೀ ಬಳಸಿ ಕೊಠಡಿಯ ಬಾಗಿಲು ತೆರೆದು
ನೋಡಿದಾಗ ತಕ್ಷಿತ್ ಮೃತದೇಹ ನೆಲದ ಮೇಲೆ ಬಿದ್ದಿರುವುದು
ಕಂಡುಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles