ನ್ಯೂಸ್ ನಾಟೌಟ್ : ರಾಷ್ಟ್ರೀಯ ಸಿಪಿಆರ್ (CPR) ಜಾಗೃತಿ ವಾರದ ಅಂಗವಾಗಿ, ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಗೂ ನರ್ಸಿಂಗ್ ವಿಭಾಗದ ವತಿಯಿಂದ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜೀವ ರಕ್ಷಕ ಹೃದಯ-ಶ್ವಾಸ ಪುನರುಜ್ಜೀವನ (Cardiopulmonary Resuscitation: CPR) ಕೌಶಲ್ಯದ ಅರಿವು ಮೂಡಿಸುವ ಉದ್ದೇಶದಿಂದ ಸಿಪಿಆರ್ ಜಾಗೃತಿ ದಿನವನ್ನು ಅ. 17ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ (ರಿ) ಸುಳ್ಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ವಹಿಸಿ ಆರೋಗ್ಯ ಸೇವೆಯಲ್ಲಿ ಸಿಪಿಆರ್ ತರಬೇತಿಯ ಅಗತ್ಯವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಉಪಸ್ಥಿತರಿದ್ದು, ಸ್ಫೂರ್ತಿದಾಯಕ ಮಾತುಗಳೊಂದಿಗೆ ಶುಭ ಹಾರೈಸಿದರು. ಅವರು ಸಿಪಿಆರ್ ತಂತ್ರಜ್ಞಾನ ಮತ್ತು ಅದರ ಜೀವ ಉಳಿಸುವ ಮಹತ್ವವನ್ನು ವಿವರಿಸಿದರು.
ಶ್ವಾಸಕೋಶ ವಿಭಾಗದ ಪ್ರಾಧ್ಯಾಪಕ ಡಾ. ಪ್ರೀತಿರಾಜ್ ಬಲ್ಲಾಳ್ ‘ಸಿಪಿಆರ್ ಪರಿಚಯ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಸಿಪಿಆರ್ ಮಾಡುವ ಸರಿಯಾದ ವಿಧಾನ, ಜೀವಾಪಾಯದ ಸಮಯದಲ್ಲಿ ಇದರಿಂದಾಗುವ ಪ್ರಯೋಜನಗಳನ್ನು ವಿವರಿಸಿದರು. ಶ್ವಾಸಕೋಶ ವಿಭಾಗದ ವೈದ್ಯಾಧಿಕಾರಿಗಳಾದ ಡಾ. ವಿಶ್ವೇಶ್ ಮತ್ತು ತಂಡ ಸಿಪಿಆರ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಸಿಪಿಆರ್ ಜಾಗೃತಿ ಬೂತ್ ಉದ್ಘಾಟಿಸಲಾಯಿತು. ಇದು ವಾರಪೂರ್ತಿ ಸಾಮಾನ್ಯರಿಗೆ ಸಿಪಿಆರ್ ಕುರಿತು ಶಿಕ್ಷಣ ನೀಡುವ ವೇದಿಕೆಯಾಗಿದೆ ಕಾರ್ಯನಿರ್ವಹಿಸಲಿದೆ. ಶ್ವಾಸ ಕೋಶ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಸುಶ್ಮಿತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ವಾಸಕೋಶ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅನಿರುದ್ಧ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು. ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.













