27.7 C
Sullia
Sunday, March 8, 2026

ಸುಳ್ಯ : ಅ. 19ರಂದು ವಿದ್ಯಾರ್ಥಿಗಳಿಗೆ “ಗೋವಿನ ಪ್ರಬಂಧ ಸ್ಪರ್ಧೆ”

ನ್ಯೂಸ್ ನಾಟೌಟ್: ವಿದ್ಯಾರ್ಥಿಗಳಲ್ಲಿ ಗೋವುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಪವಿತ್ರ ಸಂಸ್ಕೃತಿಯ ಪರಂಪರೆಯ ಬಗ್ಗೆ ಗೌರವ ಬೆಳೆಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ನಗರ- ಸುಳ್ಯ ಪ್ರಖಂಡ ವತಿಯಿಂದ ನವೆಂಬರ್‌ 1 ರಂದು ನಡೆಯಲಿರುವ ಸಾರ್ವಜನಿಕ ಗೋಪೂಜೆ ಕಾರ್ಯಕ್ರಮದ ಅಂಗವಾಗಿ “ಗೋವಿನ ಪ್ರಬಂಧ ಸ್ಪರ್ಧೆ” ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಪ್ರಬಂಧ ಸ್ಪರ್ಧೆಯನ್ನು ಅಕ್ಟೋಬರ್‌ 19ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಗೋವಿನ ಬಗೆಗಿನ ಈ ಸ್ಪರ್ಧೆಯಲ್ಲಿ 7, 8, 9 ಮತ್ತು 10ನೇ ತರಗತಿಯವರು ಪಾಲ್ಗೊಳ್ಳಲು ಅವಕಾಶವಿದೆ. ಪ್ರಬಂಧ ಸ್ಪರ್ಧೆಗೆ ಸಾಹಿತ್ಯ ಮತ್ತು ಪೆನ್ಸಿಲ್ ಸ್ಪರ್ಧಾಳುಗಳೇ ತರತಕ್ಕದ್ದು ( ಪ್ರಬಂಧ ಬರೆಯಲು ಹಾಳೆ ನೀಡಲಾಗುವುದು). ಸ್ಪರ್ಧೆಯ ವಿಜೇತರಿಗೆ ನ. 1ರಂದು ಸಭಾಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರೋತ್ಸಾಹಕ ಬಹುಮಾನವಿದೆ. ಹೆಚ್ಚಿನ ಮಾಹಿತಿಗೆ 7259100092 , 9482205884 ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

Latest Articles