27.7 C
Sullia
Sunday, March 8, 2026

ಗಗನಕ್ಕೇರಿದ ಚಿನ್ನದ ದರ,ಪಾಲಿಶ್ ನೆಪದಲ್ಲಿ ಮನೆ ಬಾಗಿಲಿಗೆ ಬರುವ ಕಳ್ಳರ ಬಗ್ಗೆ ಇರಲಿ ಎಚ್ಚರ!

ನ್ಯೂಸ್ ನಾಟೌಟ್ :ಈಗೀಗ ವೆರೈಟಿ ವೆರೈಟಿ ಕಳ್ಳರು ಕಾಣ ಸಿಕ್ತಾರೆ.ಬ್ಯಾಂಕ್ ಪಾಸ್ ವರ್ಡ್ ಕೇಳಿ ಖಾತೆಯಿಂದಲೇ ಹಣ ದೋಚುವುದು,
ಡಿಜಿಟಲ್ ಕಳ್ಳರು ಇದ್ದಾರೆ.ಇದೀಗ ಚಿನ್ನದ ದರ ಗಗನಕ್ಕೇರಿದ ಬಳಿಕ ಬೆಲೆಬಾಳುವ ಚಿನ್ನಾಭರಣ ಲಪಟಾಯಿಸುವ ಗ್ಯಾಂಗ್ ಸೃಷ್ಟಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜನರು ಎಚ್ಚೆತ್ತುಕೊಳ್ಳದಿದ್ದರೆ ಬೆಲೆಬಾಳುವ ಚಿನ್ನಾಭರಣಗಳನ್ನು ಅನಾಯಾಸವಾಗಿ ಎಗರಿಸಿಕೊಂಡು ಪರಾರಿಯಾಗುವುದು ಖಚಿತ.ಹಿಂದೆ ಕರಾವಳಿ ಭಾಗದಲ್ಲಿ ಪಾಲಿಶ್ ಹೆಸರಿನಲ್ಲಿ ಜನರನ್ನು ಪಾಲಿಶ್ ಮಾಡಿ ಚಿನ್ನದ ಆಭರಣ ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಸಾಕಷ್ಟು ಘಟನೆಗಳು ಅಲ್ಲಲ್ಲಿ ನಡೆಯುತ್ತಿತ್ತು. ತಿಂಗಳಿಗೆ ಎರಡು ಮೂರಾದರೂ ಇಂತಹ ಪ್ರಕರಣಗಳೂ ದಾಖಲಾಗುತ್ತಿತ್ತು. ಕೆಲವು ಆರೋಪಿಗಳ ಬಂಧನವಾದರೆ, ಕೆಲವರು ತಪ್ಪಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಇಂತಹ ಪ್ರಕರಣ ಸಂಖ್ಯೆಯ ಕಡಿಮೆಯಾಗಿತ್ತು.


ಆದರೆ ಇದೀಗ ಮತ್ತೆ ಅಂತಹುದೇ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಒಂದೆಡೆ ಚಿನ್ನದ ಬೆಲೆಯೂ ಏರಿಕೆ ಯಾಗುತ್ತಿದ್ದು, ಇದರಿಂದ ವಂಚಕರು ಮತ್ತೆ ಸಕ್ರಿಯರಾಗುತ್ತಿದ್ದಾರೆ.ಪಾಲಿಶ್ ಹೆಸರಿನಲ್ಲಿ ಬರುವ ಖದೀಮರು ಮಹಿಳೆಯರೇ ಇರುವ ಮನೆಗಳನ್ನು ನೋಡಿ
ಚಿನ್ನವನ್ನು ತೊಳೆದು ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸುತ್ತಾರೆ. ಒಂದು ವೇಳೆ ಚಿನ್ನದ ಆಭರಣವನ್ನು ಅವರಿಗೆ ಕೊಟ್ಟಲ್ಲಿ ತಮ್ಮಲ್ಲಿರುವ ದ್ರಾವಣದಲ್ಲಿ ಅದನ್ನು ಮುಳುಗಿಸಿ ಚಿನ್ನ ಕರಗಿಸುವ ಮೂಲಕ ಏಗರಿಸುತ್ತಾರೆ.ಈ ಕಳ್ಳರಿಗೆ ಗ್ರಾಮೀಣ ಪ್ರದೇಶವೇ ಟಾರ್ಗೆಟ್ ಆದರೆ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆಯೇ ಹೆಚ್ಚು.ಆದ್ದರಿಂದ ಇಂತಹ.ಜಾಲದ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ಎಚ್ಚರಿಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles