ನ್ಯೂಸ್ ನಾಟೌಟ್: ಪ್ರೀತಿಸಿದ ಹುಡುಗಿ ಜೀವನಪೂರ್ತಿ ತನ್ನ ಜತೆ ಇರುತ್ತಾಳೆ ಎಂದು ನಂಬಿದ ಪ್ರಿಯಕರನೊಬ್ಬ ಆಕೆಗೆ ಬೇಕಾದ ಎಲ್ಲ ಸಹಾಯವನ್ನೂ ಮಾಡುತ್ತಾನೆ. ಜತೆಗೆ ಸ್ಕೂಟಿಯನ್ನೂ ಗಿಫ್ಟ್ ಆಗಿ ನೀಡುತ್ತಾನೆ. ಆದರೆ, ಆಕೆ ಮಾತ್ರ ಈತನನ್ನು ಸರಿಯಾಗಿ ಉಪಯೋಗಿಸಿ ಇನ್ನೊಬ್ಬನ ಜತೆ ಸುತ್ತಾಟ ನಡೆಸುತ್ತಾಳೆ.
ಇದು ಪ್ರಿಯಕರನಿಗೆ ಗೊತ್ತಾಗಿ ಯುವತಿ ರೆಡ್ ಹ್ಯಾಂಡ್ ಆಗಿ ಪ್ರಿಯಕರ ಆಕೆಗೆ ನೀಡಿದ ಸ್ಕೂಟಿಯನ್ನು ವಾಪಸು ಪಡೆದುಕೊಳ್ಳುತ್ತಾನೆ. ಇಂಥದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯುವಕನ ಯುವಕನ ಈ ಧೈರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಯುವತಿ ತಾನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನಿಗೆ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಸ್ಕೂಟಿಯಲ್ಲಿ ಸುತ್ತಾಡುತ್ತಿರುವ ವೇಳೆ ಆಕೆ ಬಾಯ್ಫ್ರೆಂಡ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈಕೆಯ ಮೋಸದಾಟದಿಂದ ಕೋಪಗೊಂಡ ಗೆಳೆಯ ಆಕೆಗೆ ಬೈದು, ಸ್ಕೂಟಿಯಿಂದ ಕೆಳಗಿಳಿಯುವಂತೆ ಹೇಳಿ ಕೊನೆಗೆ ತಾನು ಗಿಫ್ಟ್ ನೀಡಿದ್ದಂತಹ ಸ್ಕೂಟರ್ ಅನ್ನು ಆಕೆಯಿಂದ ಕಿತ್ತುಕೊಂಡು ಹೋಗಿದ್ದಾನೆ.