ಮಣಿಪಾಲ: ಕೆ.ಎಂ.ಸಿ ಮಣಿಪಾಲ ದಲ್ಲಿ ಕ್ಯಾನ್ಸರ್, ಕಿಡ್ನಿ ಫೆಲ್ಯೂರ್, ಮೆದುಳಿನ ಕಾಯಿಲೆ ಇನ್ನಿತರ ಕೊನೆಯ ಹಂತದಲ್ಲಿರುವ ಕಾಯಿಲೆಗಳ ಚಿಕಿತ್ಸೆಯಲ್ಲಿರುವ ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು ಅನೇಕ ವಷ೯ಗಳಿಂದ ಆರೈಕೆ ಮಾಡುತ್ತಿರುವ ಮನೆಯವರ ಪರಿಸ್ಥಿತಿ ಹೇಳತೀರದು. ಇಂತಹ ರೋಗಿಗಳ ಕಾಳಜಿಗಾಗಿ ಇರುವ ವಿಭಾಗವೇ “ಫ್ಸಾಲಿಯೇಟೀವ್ ಕೇರ್ “. ಇದರ ಪೂರ್ಣ ಪ್ರಯೋಜನವನ್ನು ಹೆಚ್ಚಿನ ರೋಗಿಗಳು ಪಡೆಯುವಂತಾಗಬೇಕು ಎಂದು ವಿಭಾಗದ ಮುಖ್ಯಸ್ಥರಾದ ಡಾII ನವೀನ್ ಸಾಲಿನ್ಸ್ ಮನವಿ ಮಾಡಿದ್ದಾರೆ. ಅವರು ಜು.29 ರಂದು ಮಣಿಪಾಲ ರೋಟರಿ ಸದಸ್ಯರೊಂದಿಗೆ ನಡೆದ ಸಂವಾದ ಕಾಯ೯ಕ್ರಮದಲ್ಲಿ ಮಾಹಿತಿ ನೀಡಿದರು.
ಕ್ಯಾನ್ಸರ್ ಮುಂತಾದ ದೀಘ೯ ಕಾಲದ ಚಿಕಿತ್ಸೆಯಲ್ಲಿರುವ ರೋಗಿಗಳು ಹಾಗೂ ಮನೆಯವರ ಮನೋಸ್ಥಯ೯ವನ್ನು ಹೆಚ್ಚಿಸಲು ಅನೇಕ ಜನ ಮನೋ ಸಾಮಾಜಿಕ ಆಪ್ತ ಸಮಾಲೋಚಕರ ಅಗತ್ಯತೆಯ ಕುರಿತು ತಿಳಿಸಿದರು. ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾIIವಿರೂಪಾಕ್ಷ ದೇವರಮನೆ ರೋಟರಿ ವತಿಯಿಂದ ಈ ವಷ೯ ನಡೆಯುವ ಚಟುವಟಿಕೆಯ ಕುರಿತು ತಿಳಿಸಿದರು. ಡಾII ಗಿರಿಜಾ, ಡಾII ಹೆಚ್.ಜೆ ಗೌರಿ ಹಾಗೂ ಇನ್ನಿತರ ಹಲವಾರು ಜನ ರೋಟರಿ ಸದಸ್ಯರು ಭಾಗವಹಿಸಿದ್ದರು. ಡಾ|| ವಿನಯ್ ವೆಂಕಟೇಶ್ ಡಾ|| ಅಚ೯ನಾ ಮಕ್ಕಳ.ಕ್ಯಾನ್ಸರ್ ಚಿಕಿತ್ಸೆ ಪ್ರಗತಿ ಕುರಿತು ಮಾತನಾಡಿದರು.