ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯದಲ್ಲಿ ಅಡಿಕೆ ಕಳ್ಳನೋರ್ವ ಸಿಕ್ಕಿ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ.ಈ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿದ
ಆರೋಪಿಯನ್ನು ಮತ್ತೊಮ್ಮೆಆತ ತೋಟಕ್ಕೆ ಬಂದಾಗ ಸ್ಥಳೀಯರು
ಕಾದು ಕುಳಿತು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸುಬ್ರಹ್ಮಣ್ಯ
ಸಮೀಪದ ಏನೆಕಲ್ಲಿ ನಡೆದಿದೆ.
ಏನೆಕಲ್ಲಿನ ಸುಜಿತ್ ಅವರ ತೋಟ ದಲ್ಲಿ ಕೆಲವು ದಿನಗಳ ಹಿಂದೆ
ಕಳ್ಳತನ ನಡೆದಿತ್ತು. ಕಳ್ಳ ಮತ್ತೆ ಬರಬಹುದು ಎಂಬ ನಿರೀಕ್ಷೆಯಲ್ಲಿ
ಸ್ಥಳೀಯರು ಕಾಯುತ್ತಿದ್ದರು. ನಿರೀಕ್ಷೆಯಂತೆ ಆತ ಮತ್ತೆ ಬಂದು ಜನರ
ಕೈಗೆ ಸಿಕ್ಕಿ ಬಿದ್ದನು. ಆರೋಪಿಯನ್ನು ಗೌತಮ್ ಎಂದು ಗುರುತಿಸಲಾಗಿದೆ.
ಸ್ಥಳೀಯರು ಆತನನ್ನು ವಿಚಾರಿಸಿ ಬಳಿಕ ಪೊಲೀಸರಿಗೆ ಮಾಹಿತಿ
ನೀಡಿದರು. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ
ನಡೆಸಿದ್ದಾರೆ.













