ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಮತ್ತೆ ಗುಡುಗಿದ್ದಾರೆ. ಭೂ ಹಗರಣದಿಂದ ನನ್ನ ವರ್ಗಾವಣೆ ಮಾಡಿದ್ರು ಅನ್ನೋದು ನೀವು ಕಟ್ಟಿದ ಕತೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ. ದಲಿತ ಸಮುದಾಯದ ಶರತ್ ಅವರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದ್ರು. ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು._
ಕೋವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು. ಸಾ.ರಾ.ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣ ಮಾಡಿದೆ ಅಂತ ಆರೋಪ ಮಾಡಿದ್ದರು. ಆದರೆ ಉಲ್ಲಂಘನೆ ಆಗಿಲ್ಲ ಅಂತ ಜಿಲ್ಲಾಧಿಕಾರಿಗಳಿಂದಲೇ ವರದಿ ಬಂದಿದೆ. ಲಿಂಗಾಂಬುದಿ ಕೆರೆಯ ಜಾಗ ಒತ್ತುವರಿ ಆಗಿಲ್ಲ ಎಂದರು._ಆರ್.ಟಿ.ನಗರದಲ್ಲಿ ಒಬ್ಬರಿಗೆ ಹೆಚ್ಚುವರಿಯಾಗಿ ಪರಿಹಾರ ಕೊಟ್ಟಿದ್ದರು. ಇದನ್ನು ನೀವು ಬರುವುದಕ್ಕೂ ಹಿಂದೆಯೇ ಮುಡಾ ಅಧ್ಯಕ್ಷರು ಪತ್ತೆ ಮಾಡಿದ್ದರು. ಸರ್ವೇ ನಂ.4 ವಿಚಾರದಲ್ಲಿ ನೀವು ಸುಪ್ರೀಂಕೋರ್ಟ್ನಲ್ಲಿ ಪ್ರವೈಟ್ ಲಾಯರ್ ಇಟ್ಟಿದ್ದಿರಿ. ಅದಕ್ಕಾಗಿ ಮುಡಾದಿಂದ 24 ಲಕ್ಷ ರೂ.ಗಳನ್ನು ನಿಯಮ ಮೀರಿ ಕೊಟ್ಟಿದ್ದಿರಿ. ಆದರೆ ನಿಮ್ಮ ಕೇಸ್ ಕೋರ್ಟ್ನಲ್ಲಿ ಡಿಸ್ಮಿಸ್ ಆಗಿದೆ ಎಂದು ಹಳೆಯ ವಿಚಾರಗಳನ್ನೆಲ್ಲಾ ಪ್ರಸ್ತಾಪಿಸಿದರು. ರೋಹಿಣಿ ಸಿಂಧೂರಿ ಸಿಂಗಂ ಅಲ್ಲ. ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ. ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂಕೋರ್ಟ್ವರೆಗೂ ಹೋದವರು ಮೂರನೇ ದಿನದಲ್ಲಿ ಪ್ರಮೋಧ ದೇವಿ ಅವರ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಎಲ್ಲಿಯಾದರೂ ಹೀಗೆ ನಡೆಯುತ್ತಾ ಎಂದು ಪ್ರಶ್ನಿಸಿದರು. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಒಂಥರಾ ಟ್ರೈನಿಂಗ್ ಸ್ಕೂಲ್. ಬರ್ತಾರೆ ಕಲಿತಾರೆ ಹೋಗ್ತಾರೆ. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.