ನ್ಯೂಸ್ ನಾಟೌಟ್: ಸುಳ್ಯದ ಮೊಗರ್ಪಣೆ ಸಮೀಪದ ಮಸೀದಿ ಬಳಿ ಭೀಕರ ಅಪಘಾತ ಇದೀಗ ಸಂಭವಿಸಿದೆ. ಬೈಕ್ ಮತ್ತು ಲಾರಿ ನಡುವೆ ಈ ಅವಘಡ ಆಗಿದೆ. ಬೈಕ್ ನಲ್ಲಿದ್ದ ಸವಾರನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿ ಕಲ್ಲುಗುಂಡಿ ಕಡೆಗೆ ತೆರಳುತ್ತಿದ್ದ ಹೋಟೆಲ್ ಉದ್ಯೋಗಿಯ ಬೈಕ್ ಗೆ ಗುದ್ದಿದೆ. ಸದ್ಯ ಸವಾರನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ ಎಂದು ತಿಳಿದುಬಂದಿದೆ.













