ನ್ಯೂಸ್ ನಾಟೌಟ್: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ (Krishna Matha) ಒಂದು ತಿಂಗಳ ಕಾಲ ನಡೆಯುವ ಶ್ರೀ ಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಗವಹಿಸಿದರು. ಎರಡು ದಿನದ ಉಡುಪಿ ಪ್ರವಾಸ ಮಾಡಿದ ಆರಿಫ್ ಮೊಹಮ್ಮದ್ ಖಾನ್ ಕೊಲ್ಲೂರು ಮೂಕಾಂಬಿಕೆ ಹಾಗೂ ಉಡುಪಿಯ ಶ್ರೀ ಕೃಷ್ಣದೇವರ ದರ್ಶನ ಪಡೆದಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸನ್ಮಾನಿಸಿದರು. ಈ ವೇಳೆ ಶ್ರೀ ಕೃಷ್ಣ ಮಠದ ಇತಿಹಾಸ ಪುರಾಣಗಳ ಬಗ್ಗೆ ಆರಿಫ್ ಮೊಹಮ್ಮದ್ ಖಾನ್ ಸ್ವಾಮೀಜಿಯಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮಗಳು ಬೇರೆ ಆಗಿರಬಹುದು. ಆದರೆ ನಾವೆಲ್ಲರೂ ಭಾರತೀಯರು ಮತ್ತು ಒಂದೇ ಸಂಸ್ಕೃತಿಯವರು. ಭಿನ್ನ-ಭಿನ್ನ ಹೆಸರಿನಲ್ಲಿ ದೇವರನ್ನು ಪೂಜಿಸಿದರೂ ಕೊನೆಗೆ ನಮ್ಮೆಲ್ಲರ ಪ್ರಾರ್ಥನೆ ಕೇಶವನಿಗೆ ಸಲ್ಲುವುದು. ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ಆತ್ಮ ಎಂದು ಬಣ್ಣಿಸಿದ್ದಾರೆ.
Click