ನ್ಯೂಸ್ ನಾಟೌಟ್: ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಯುವಕನಿಗೆ ಜನ ಸಾರ್ವಜನಿಕವಾಗಿ ಶಿಕ್ಷೆ ನೀಡಿದ್ದು, ವೀಡಿಯೋದಲ್ಲಿ ಕಾಣುವಂತೆ ಯುವಕನ ಕೈಗಳನ್ನು ಕಟ್ಟಲಾಗಿದೆ.ಆತನನ್ನು 4 ರಿಂದ 5 ಜನ ಹಿಡಿದುಕೊಂಡಿದ್ದು, ಅವರಲ್ಲೊಬ್ಬ ಆತನ ಪ್ಯಾಂಟನ್ನು ಬಿಚ್ಚಿದ್ದಾನೆ. ಈ ವೇಳೆ ಮತ್ತೊಬ್ಬ ಮೆಣಸಿನ ಹುಡಿ ಇರುವ ಪ್ಯಾಕೆಟ್ ಅನ್ನು ಕಟ್ ಮಾಡಿ ಅದರಲ್ಲಿದ್ದ ಮೆಣಸಿನ ಹುಡಿಯನ್ನು ಯುವಕನ ಹಿಂಭಾಗಕ್ಕೆ ಸುರಿಯಲಾಗಿದೆ. ಅಲ್ಲದೇ ಪೆನ್ಸಿಲ್ವೊಂದರಿಂದ ತಳ್ಳುವ ಮೂಲಕ ಮೆಣಸಿನ ಹುಡಿ ಯುವಕನ ಗುದದ್ವಾರ ಸೇರುವಂತೆ ಮಾಡಿದ್ದಾರೆ.
ಈ ವೇಳೆ ಯುವಕ ನೋವು ಹಾಗೂ ಉರಿ ತಡೆಯಲಾಗದೇ ಕಿರುಚಿಕೊಂಡಿದ್ದು, ಬಿಟ್ಟು ಬಿಡುವಂತೆ ಅವರಲ್ಲಿ ಬೇಡಿದ್ದಾನೆ. ಆದರೆ ಜನ ಆತನ ಮೇಲೆ ಕರುಣೆ ತೋರಿಲ್ಲ. ಅಲ್ಲದೇ ಆತನ ಬಿಚ್ಚಿದ ಪ್ಯಾಂಟ್ನ್ನು ವಾಪಸ್ ಮೇಲೆರಿಸಿ ಗುಬ್ಬಿ ಹಾಕಿ ಬಿಡುತ್ತಾರೆ. ಆದರೆ ಕಟ್ಟಿದ ಕೈಯನ್ನು ಮಾತ್ರ ಬಿಚ್ಚಿಲ್ಲ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಕ್ರೂರವಾಗಿ ಹಿಂಸೆ ನೀಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಮದು ಜನಾಕ್ರೋಶ ವ್ಯಕ್ತವಾಗಿದೆ.