ಬೆಂಗಳೂರು: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಝೀ ಟಿವಿ ಕನ್ನಡ ರಿಯಾಲಿಟಿ ಶೋನಲ್ಲಿ ಸುಳ್ಯ ತಾಲೂಕಿನ ಮರ್ಕಂಜ ಐದು ವರ್ಷದ ಪುಟ್ಟ ಹುಡುಗಿ ಪ್ರಣನ್ಯ ಭರ್ಜರಿ ಡ್ಯಾನ್ಸ್ ಪ್ರದರ್ಶಿಸಿ ಮೊದಲ ಸುತ್ತಿನಲ್ಲೇ ತೀರ್ಪುಗಾರರ ಮನ ಗೆದ್ದಿದ್ದಾಳೆ.
ಖ್ಯಾತ ನಟ ಶಿವರಾಜ್ ಕುಮಾರ್, ನಟಿ ರಕ್ಷಿತಾ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ರಂತಹ ದಿಗ್ಗಜ ತೀರ್ಪುಗಾರರ ಫೇವರಿಟ್ ಸ್ಪರ್ಧಿಗಳಲ್ಲಿ ಪ್ರಣನ್ಯ ಕೂಡ ಒಬ್ಬಳು ಎನ್ನುವುದು ವಿಶೇಷ. ಈ ಹುಡುಗಿ ಮರ್ಕಂಜ ಗ್ರಾಮದ ಕುದ್ಪಾಜೆ ಮನೆಯ ರಾಧಾಕೃಷ್ಣ ಹಾಗೂ ನಶ್ಮಿತ ದಂಪತಿಯ ಪುತ್ರಿ. ಈಕೆ ಮಂಗಳೂರಿನ ಚಿಗುರು ಟೀಮ್ ನ ಸಂತೋಷ್ ಮಾಸ್ಟರ್ ಅವರಿಂದ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಪ್ರೀಕೆಜಿ ವಿದ್ಯಾರ್ಥಿನಿಯಾಗಿದ್ದಾಳೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ. ಈ ಮಾತಿಗೆ ಪ್ರಣನ್ಯ ದಿ ಬೆಸ್ಟ್ ಉದಾಹರಣೆ. ಏಕೆಂದರೆ ಇಷ್ಟು ಸಣ್ಣ ವಯಸ್ಸಿಗೆ ಪ್ರಣನ್ಯ ಹಲವು ಪ್ರಶಸ್ತಿ ಬಾಚಿ ಹೆಸರುಗಳಿಸಿದ್ದಾರೆ.ಇವುಗಳಲ್ಲಿ ಪ್ರಮುಖ ಸಾಧನೆಗಳೆಂದರೆ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಕೃಷ್ಣವೇಷ ಸ್ಪರ್ಧೆ ಪ್ರಥಮ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ದ್ವಿತೀಯ, ಪೊಸಿಟ್ಯೂವ್ ಫ್ರೊಡೆಕ್ಷನ್ ಆಯೋಜಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ, ಕರ್ನಾಟಕ ರಾಜ್ಯ ಡ್ಯಾನ್ಸ್ ಸ್ಟೋಟ್ಸ್ ಚಾಂಪಿಯನ್ ಮಡಿಕೇರಿ ಡ್ಯಾನ್ಸ್ ಸ್ಪರ್ಧೆಯಲ್ಲಿ ದ್ವಿತೀಯ, ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪೇಷಲ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಉಡುಪಿ ಪ್ರಥಮ, ಮರುಕ್ಯೂರಿ ಡಾನ್ಸ್ ಕ್ರೇವ್ ಬೆಳಂಪಳ್ಳಿ ಉಡುಪಿ ರಾಜ್ಯ ಮಟ್ಟದ ಡ್ಯಾನ್ಸ್ನಲ್ಲಿ ಪ್ರಥಮ, ರಾರಾಸಂ ಪೌಂಡೇಶನ್ (ರಿ) ಬಂಟ್ವಾಳ ಆಯೋಜಿಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಸೂಪರ್ ಕಿಡ್ಸ್ ಚಾನೆಲ್ ಡಿ ಬಾಸ್ ಬೆಂಗಳೂರು ಆಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಕಣ್ಣೂರು ಬಾಯ್ಸ್ ಅಕಾಡೆಮಿ ಮಂಗಳೂರು ಆಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ವಾರ್ ನಲ್ಲಿ ದ್ವಿತೀಯ, ಪರಿವರ್ತನಾ ಸೆಂಟರ್ ಕಾಪು ಅಯೋಜಿಸಿದ ಡ್ಯಾನ್ಸ್ ಪ್ರಥಮ, ನಮ್ಮ ಕುಡ್ಲ ರಿಯಾಲಿಟಿ ಶೋನಲ್ಲಿ ಫೈನಲ್ ಹಾಗೂ ಡ್ಯಾನ್ ಬೇಬಿ ಡ್ಯಾನ್ಸ್ ವಿ೪ ನ್ಯೂಸ್ ಮಂಗಳೂರು ಆಯೋಜಿಸಿದ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ.