ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೊಯನಾಡಿನಿಂದ ಸುಳ್ಯಕ್ಕೆ KSRTC ಸಿಟಿ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಬಸ್ ಟರ್ನ್ ಹೊಡೆಯೋ ವಿಷಯವೇ ಇದೀಗ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಳ್ಯ ಬಸ್ ನಿಲ್ದಾಣದಿಂದ ಹೊರಡುವ KSRTC ಸಿಟಿ ಬಸ್ ಕೊಯನಾಡಿನ ಮೇಲೆ ಪೇಟೆಯ (ಸೇತುವೆಯ ಆಚೆಗಿನ ಭಾಗ) ಬಳಿ ಟರ್ನ್ ಹೊಡೆದು ಜನರನ್ನು ತುಂಬಿಕೊಂಡು ಮತ್ತೆ ಸುಳ್ಯದತ್ತ ಬರುತ್ತದೆ. ಆದರೆ ಈ ಬಸ್ ಗಳ ಪೈಕಿ ಒಂದು ಬಸ್ ಮಾತ್ರ ಕೊಯನಾಡಿನ ಗಣಪತಿ ದೇವಸ್ಥಾನದ ಬಳಿಯೇ ಟರ್ನ್ ಪಡೆದು ಸುಳ್ಯದತ್ತ ಮುಖ ಮಾಡಿ ಅಲ್ಲೇ ಸೈಡ್ ನಲ್ಲಿ ನಿಲ್ಲುತ್ತದೆ. ಇದರಿಂದ ಸೇತುವೆಯ ಆಚೆಗಿನ ಒಂದಷ್ಟು ಮಂದಿ ಈಗ ರೊಚ್ಚಿಗೆದ್ದಿದ್ದಾರೆ. ಬಸ್ ನವರು ಬೇಕೆಂದೇ ಟರ್ನ್ ಮಾಡಿ ವಿದ್ಯಾರ್ಥಿಗಳಿಗೆ , ಪ್ರಯಾಣಿಕರಿಗೆ ತೊಂದರೆ ಮಾಡುತ್ತಿದ್ದಾರೆ.
ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳು ಈಗ ಕೆಸರಿನ ಮೇಲೆ ನಿಂತು ಬಸ್ ಹತ್ತುವಂತೆ ಆಗಿದೆ ಎಂದು ದೂರಿದ್ದಾರೆ. ಮೂಲಗಳ ಪ್ರಕಾರ ಹಳೆಯ ರಾಜಹಂಸ ಬಸ್ ಅನ್ನು ಸಿಟಿ ಬಸ್ ಆಗಿ ಬದಲಾಯಿಸಿದ್ದಾರೆ. ಇದು ಸ್ವಲ್ಪ ಉದ್ದ ಜಾಸ್ತಿ. ಮೇಲೆ ಪೇಟೆ ಬಳಿ ಅದನ್ನು ಟರ್ನ್ ಮಾಡೋಕೆ ಆಗಲ್ಲ. ಹೀಗಾಗಿ ಗಣಪತಿ ಟೆಂಪಲ್ ಸಮೀಪ ಟರ್ನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈಗ ಬಸ್ ವಿಚಾರವೇ ಅಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕಿದೆ.