ನ್ಯೂಸ್ ನಾಟೌಟ್: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಮೇಲೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಗಂಡ ತಲೆ ಕತ್ತರಿಸಿ, ಬಳಿಕ ತಲೆಯನ್ನು ಹಿಡಿದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಅಪರಾಧಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಸುದೀರ್ಘ ವಿಚಾರಣೆಗಳ ಬಳಿಕ ಉತ್ತರ ಪ್ರದೇಶದ ಬಂದಾ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದೆ. 39 ವರ್ಷದ ಕಿನ್ನರ್ ಯಾದವ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ನೇತಾ ಪಟ್ಟಣದ ಬಬೇರೋ ಕೋತ್ವಾಲಿ ವಲಯದ ಕಿನ್ನರ್ ಯಾದವ್ ತನ್ನ ಪತ್ನಿ ವಿಮಲಾ ದೇವಿಯನ್ನು 2020ರಲ್ಲಿ ಹತ್ಯೆಗೈದಿದ್ದ. ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇದೆ ಅನ್ನೋದು ಆರೋಪ ಹೊರಿಸಿದ್ದ. ನಾಲ್ಕು ವರ್ಷಗಳ ಹಿಂದೆ ಪತ್ನಿ, ಬೇರೊಬ್ಬನ ಜೊತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಳು. ಇದು ಕಿನ್ನರ್ ಯಾದವ್ ಆಕ್ರೋಶ ಹೆಚ್ಚಿಸಿತ್ತು. ವಾರ್ನಿಂಗ್ ಬಳಿಕವೂ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ಕೊಡಲಿಯಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದ.
ಇಷ್ಟಕ್ಕೆ ಕಿನ್ನರ್ ಯಾದವ್ ಆಕ್ರೋಶ ತಣಿದಿರಲಿಲ್ಲ. ಅದೇ ಕೊಡಲಿಯಿಂದ ರುಂಡವನ್ನೇ ಬೇರ್ಪಡಿಸಿದ್ದ. ರಕ್ಷಣೆಗೆ ಧಾವಿಸಿದ ಪತ್ನಿಯ ಗೆಳೆಯನ ಮೇಲೂ ಈತ ಹಲ್ಲೆ ನಡೆಸಿದ್ದ. ಪತ್ನಿಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕ ರಸ್ತೆಯಲ್ಲಿ ಸಾಗಿದ್ದ. ನಡೆದುಕೊಂಡೇ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆ ವಿವರಿಸಿ ಪೊಲೀಸರಿಗೆ ಶರಣಾಗಿದ್ದ. ಕಿನ್ನರ್ ಯಾದವ್ ಬಂಧಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. 2.5 ವರ್ಷ ಪೊಲೀಸರು ಹುಡುಕಾಡಿ ಕೊನೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನೂ ಪೊಲೀಸರು ಪತ್ತೆ ಹಚ್ಚಿದ್ದರು. ಬಳಿಕ ಈತನಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಈತ ಚಿಕಿತ್ಸೆ ಪಡೆದ ಕ್ಲಿನಿಕ್ ದಾಖಲೆಗಳನ್ನು ತೆಗೆದು ಕೋರ್ಟ್ಗೆ ಸಲ್ಲಿಸಲಾಗಿತ್ತು. ಈಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಹತ್ಯೆ ನಡೆದ 4.5 ವರ್ಷಗಳ ಬಳಿಕ ನ್ಯಾಯ ಹೊರಬಿದ್ದಿದೆ. ಕ್ರೂರವಾಗಿ ಪತ್ನಿಯ ಹತ್ಯೆಗೈದ ಕಿನ್ನರ್ ಯಾದವ್ಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
Click