ನ್ಯೂಸ್ ನಾಟೌಟ್: 70 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸಾವಿನ ನಂತರ 25 ವರ್ಷದ ಯುವತಿಯೊಂದಿಗೆ ಮರುಮದುವೆ ಮಾಡಿಕೊಂಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ ಜು.25ರಂದು ವರದಿಯಾಗಿದೆ.
ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ವಿವಾಹವಾಗಿದ್ದಾರೆ. ವೃದ್ಧ ರೈತನಾಗಿದ್ದು, ಆತನ ಮೊದಲ ಹೆಂಡತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು ಎನ್ನಲಾಗಿದೆ. ದಂಪತಿಗಳು ಇಸ್ಲಾಮಿಕ್ ಆಚರಣೆಗಳ ಪ್ರಕಾರ ವಿವಾಹವಾಗಿದ್ದು, ವದು-ವರ ಇಬ್ಬರೂ ಸ್ವ ಇಚ್ಚೆಯಿಂದಲೇ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ವಿವಾಹದ ನಂತರದ ಇವರ ಸಂದರ್ಶನದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
Click